ಮೈಸೂರು

ಆದಿವಾಸಿ ಮಕ್ಕಳಿಗಾಗಿ ಚಿಗುರು ಶಾಲೆ ಆರಂಭಿಸಿದ ನಿಸರ್ಗ ಸಂಸ್ಥೆ

ಮೈಸೂರು,ಸೆ.15:- ಮಹಾಮಾರಿ ಕೊರೊನಾ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದೆ.  ಮಕ್ಕಳ ಶಿಕ್ಷಣದಿಂದ ಹಿಡಿದು ಉದ್ಯಮದವರೆಗೂ ಸಾಕಷ್ಟು ಹೊಡೆತವನ್ನೇ ನೀಡಿದೆ.

ಶಿಕ್ಷಣದಲ್ಲಿ ಅಂತೂ ಆದಿವಾಸಿಗಳ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ.  ಕೊರೋನಾ ಹಿನ್ನೆಲೆಯಲ್ಲಿ ಆದಿವಾಸಿಗಳ ಮಕ್ಕಳು ಶಿಕ್ಷಣದಿಂದ ಹೊರ ಉಳಿದಿದ್ದಾರೆ.  ಯಾಕೆಂದರೆ ಗುಡ್ಡಗಾಡುಗಳಲ್ಲಿ ವಾಸಿಸುವ ಅವರಿಗೆ ಆನ್ ಲೈನ್ ಶಿಕ್ಷಣ ಪಡೆಯಲು ನೆಟ್ ವರ್ಕ್ ಸೌಲಭ್ಯವಿರಲ್ಲ.  ಹೀಗಾಗಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಮತ್ತು ನಿಸರ್ಗ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ಹಾಡಿ ಮಕ್ಕಳಿಗೆ ಚಿಗುರು ಶಾಲೆ ಆರಂಭವಾಗಿದೆ. ಹಾಡಿಯ ಪಂಚಾಯಿತಿ ಕಟ್ಟೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಮೈಸೂರು ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಹಾಡಿ, ಚಿಕ್ಕೆರೆ ಹಾಡಿ, ಕುಂಟೇರಿ ಹಾಡಿ ಸೇರಿದಂತೆ 6 ಕಡೆ ಚಿಗುರು ಶಾಲೆ ಆರಂಭಗೊಂಡಿದೆ. ಆನ್​ಲೈನ್​ ತರಗತಿಗಳಿಗೆ ಆದಿವಾಸಿಗರ ಹಾಡಿಗಳಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲ. ಮೊಬೈಲ್ ಖರೀದಿಸುವಷ್ಟು ಶಕ್ತಿಯೂ ಅವರಲ್ಲಿ ಇಲ್ಲ. ಅದಕ್ಕಾಗಿ ಆದಿವಾಸಿಗಳ ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಹೀಗಾಗಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಮತ್ತು ನಿಸರ್ಗ ಸಂಸ್ಥೆ ಸೇರಿ ಚಿಗುರು ಶಾಲೆಗಳನ್ನು ಆರಂಭಿಸಿವೆ. ಶಿಕ್ಷಣದ ಜೊತೆಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಲೆ, ಆದಿವಾಸಿ ಸಂಪ್ರದಾಯ ನೃತ್ಯ, ಕರಕುಶಲ ಕಲೆಗೆ ನಿಸರ್ಗ ಸಂಸ್ಥೆ ಒತ್ತು ನೀಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: