ದೇಶಪ್ರಮುಖ ಸುದ್ದಿ

ಲಂಡನ್ ವೈದ್ಯರಿಂದ ಜಯಲಲಿತಾ ಆರೋಗ್ಯ ತಪಾಸಣೆ

ಚೆನ್ನೈ: ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಸೆ.22ರಂದು ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡದಿರುವುದು ಸಂಶಯಕ್ಕೆಡೆ ಮಾಡಿದೆ. ಏತನ್ಮಧ್ಯೆ, ಜಯಲಲಿತಾ ಆರೋಗ್ಯ ತುಂಬಾ ಬಿಗಡಾಯಿಸಿದೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ.

ಜಯಲಲಿತಾ ಅವರ ಆರೋಗ್ಯ ತಪಾಸಣೆಗೆ ಲಂಡನ್‍ನಿಂದ ವೈದ್ಯ ರಿಚರ್ಡ್ ಜಾನ್ ಬೇಲೆ ಆಗಮಿಸಿದ್ದು, ನಿನ್ನೆ ತಪಾಸಣೆ ನಡೆಸಿದ್ದಾರೆ. ಆದರೆ, ಜಯಲಲಿತಾ ಅವರ ಆರೋಗ್ಯ ಬಗ್ಗೆ ಅಪೋಲೋ ಆಸ್ಪತ್ರೆಯಾಗಲಿ, ರಾಜ್ಯ ಸರಕಾರವಾಗಲಿ ಯಾವುದೇ ಮಾಹಿತಿ ಬಹಿರಂಗ ಮಾಡುತ್ತಿಲ್ಲ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಜಯಲಲಿತಾ ಅವರ ಆರೋಗ್ಯದ ವಿಷಯವನ್ನು ಗುಟ್ಟಾಗಿಟ್ಟಿದ್ದು ಅನುಮಾನಗಳಿಗೆ ಎಡೆಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಜಯಲಲಿತಾ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದು, ರಾಜ್ಯ ಸರಕಾರ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿಕೆ ನೀಡಿ, ವದಂತಿಗಳಿಗೆ ಪೂರ್ಣ ವಿರಾಮ ಹಾಕಬೇಕೆಂದು ಹೇಳಿದ್ದಾರೆ.

ಕಾವೇರಿ ಬೀರು ಹಂಚಿಕೆ ವಿವಾದ ಸಂಬಂಧ ರಾಜ್ಯದ ಅಧಿಕಾರಿಗಳೊಂದಿಗೆ ಜಯಲಲಿತಾ ಅವರು ಸಭೆ ನಡೆಸಿದ್ದಾರೆ ಎನ್ನಲಾದ ಫೋಟೊಗಳನ್ನಾದರೂ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ.

 

Leave a Reply

comments

Related Articles

error: