ಮೈಸೂರು

ಎನ್ ಟಿಎಂ ಶಾಲೆ ಉಳಿಸಿ ಹೋರಾಟ-ನಿರಂಜನ ಮಠ ಉಳಿಸಿ ಹೋರಾಟ ಸಮಿತಿಯಿಂದ ಜಂಟಿ ಪ್ರತಿಭಟನೆ

ಮೈಸೂರು,ಸೆ.15:-  ಎನ್ ಟಿಎಂ ಶಾಲೆ ಉಳಿಸಿ ಹೋರಾಟ  ಒಕ್ಕೂಟ, ನಿರಂಜನ ಮಠ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಇಂದು  ಎನ್‌ ಟಿಎಂ ಶಾಲೆಯಿಂದ  ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿತು.

ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಬರೋಬ್ಬರಿ 80ನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನಾ ನಿರತರು ಮಾತನಾಡಿ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ. ವಿವೇಕಾನಂದರ ಆಶಯದಂತೆ ಶಾಲೆ ಉಳಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿ. ಕನ್ನಡಶಾಲೆಯನ್ನು ಉಳಿಸಿ ಎಂದು ಒತ್ತಾಯಿಸಿದರು. ಶಾಲೆಯೂ ಉಳಿಯಲಿ ಸ್ಮಾರಕವೂ ನಿರ್ಮಾಣವಾಗಲಿ ಎಂದರು.

ಇದೇ ವೇಳೆ ನಿರಂಜನ ಮಠ ವೀರಶೈವ ಸಮಾಜದವರ ಅಸ್ಮಿತೆಯಾಗಿರುವ ನಿರಂಜನಮಠವನ್ನೂ ಉಳಿಸಿ, ಸ್ಮಾರಕ ನಿರ್ಮಿಸಿ. ವೀರಶೈವರ ಭಾವನೆಗೆ ಧಕ್ಕೆ ತರಬಾರದು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ಶಾಲೆಯೂ ಉಳಿಯಲಿ,ನಿರಂಜನ ಮಠವೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ ಎಂದರು.

ಹೋರಾಟಗಾರರಾದ ಪ.ಮಲ್ಲೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: