ಮೈಸೂರು

ಪಾಲಿಕೆ ಸದಸ್ಯೆ ರಜನಿ ಅಣ್ಣಯ್ಯಗೆ ಸನ್ಮಾನ

ಮೈಸೂರು,ಸೆ.14:-  ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಸವಿತಾ ಸಮಾಜದ ಕಚೇರಿಯಲ್ಲಿ 36 ನೇ ವಾರ್ಡಿನ ಮಹಾನಗರಪಾಲಿಕೆಯ ಉಪಚುನಾವಣೆಯಲ್ಲಿ ಜಯಗಳಿಸಿದ  ರಜನಿ ಅಣ್ಣಯ್ಯ ಅವರನ್ನು ಸವಿತಾ ಸಮಾಜದ ವತಿಯಿಂದ  ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು ಹಾಗೂ ಸವಿತಾ ಸಮಾಜದ ಅಧ್ಯಕ್ಷರಾದ ಎನ್.ಆರ್. ನಾಗೇಶ್ , ಸಮಿತಿಯ ಅಧ್ಯಕ್ಷರಾದ ಎಂ. ರಾಮು ,ಮಾಜಿ ಅಧ್ಯಕ್ಷರಾದ ಹರೀಶ್ , ಮುಖಂಡರಾದ ರಘು,  ಮಹದೇವ್ ಪ್ರಸನ್ನ  ಮತ್ತುಸಂಘದ ಸದಸ್ಯರು ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: