ಮೈಸೂರು

ಹಿಂದೂ ಭಾವನೆಗಳಿಗೆ ಧಕ್ಕೆಯಾದರೆ ಉಗ್ರ ಹೋರಾಟ : ಬಸವರಾಜ್

ಮೈಸೂರು, ಸೆ.15:-   ನಮ್ಮ ಹಿಂದೂ ದೇವಾಲಯಗಳನ್ನು ಯಾರು ಮುಟ್ಟಬಾರದು ಎಂದು   ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.
ಮೈಸೂರಿನಲ್ಲಿ 95ದೇವಾಲಯಗಳನ್ನು ಒಡೆಯಲು ಪಟ್ಟಿ ಮಾಡಿದ್ದು ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಕಾರ್ಯದರ್ಶಿ ಬಸವರಾಜ್ ನಮ್ಮ ಹಿಂದೂ ದೇವಾಲಯಗಳು ಯಾರು ಮುಟ್ಟಬಾರದು.ನಮಗೆ ಮಾತ್ರ ಕೋರ್ಟಿನ ಆರ್ಡರ್ ಎಂದು ಹೇಳುವ ಜಿಲ್ಲಾಧಿಕಾರಿಗಳು ಮಸೀದಿಗಳಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ ಮೈಕ್ ಆನ್ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದಾರೆ.
ಅದಕ್ಕೆ ಕೋರ್ಟ್ ನಿಂದ ಆದೇಶವಿದೆ.  ಅದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಇಲ್ಲವೇ ಎಂದು ಪ್ರಶ್ನಿಸಿದರು.

ದೇವರಾಜ ಅರಸ್ ರಸ್ತೆಯಲ್ಲಿರುವ ಗೋರಿಯಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಅದರ ಬಗ್ಗೆ ಏಕೆ ಕ್ರಮವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು

ತಮ್ಮ ನಿರ್ಧಾರವನ್ನು ಬದಲಿಸದಿದ್ದರೆ,ಹಿಂದೂ ಭಾವನೆಗಳಿಗೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: