ದೇಶಪ್ರಮುಖ ಸುದ್ದಿ

ಉತ್ತರಾಖಂಡ ರಾಜ್ಯಪಾಲರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್‌ ಗುರುಮಿತ್‌ ಸಿಂಗ್‌ ಪ್ರಮಾಣ ವಚನ ಸ್ವೀಕಾರ

ಡೆಹ್ರಾಡೂನ್‌,ಸೆ.15-ಉತ್ತರಾಖಂಡ ರಾಜ್ಯಪಾಲರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್‌ ಗುರುಮಿತ್‌ ಸಿಂಗ್‌ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಇಲ್ಲಿನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆರ್‌. ಎಸ್. ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದರು.

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಗುರುಮಿತ್ ಸಿಂಗ್ ಅವರು ಸೇನೆಯಲ್ಲಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಈ ಮೊದಲಿನ ರಾಜ್ಯಪಾಲರಾಗಿದ್ದ ಬೇಬಿ ರಾಣಿ ಮೌರ್ಯ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಅವರ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ಎಸ್ ಸಂಧು ಮತ್ತು ಡಿಜಿಪಿ ಅಶೋಕ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: