ಲೈಫ್ & ಸ್ಟೈಲ್

ಸ್ತನ ಕ್ಯಾನ್ಸರ್ ನಿಂದ ದೂರವಿರಬೇಕಾದರೆ ತಪ್ಪದೇ ಸೇವಿಸಿ!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನಕ್ಯಾನ್ಸರ್ ಹೆಚ್ಚುತ್ತಿದೆ. 2020ರ ವೇಳೆ ಸುಮಾರು 8 ಮಹಿಳೆಯರಲ್ಲಿ  ಒಬ್ಬರಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ತಪ್ಪಿಸಿಕೊಳ್ಳಲು ನಿಮ್ಮ ಡಯಟ್ ನಲ್ಲಿ ಕೆಲವು ಆಹಾರವನ್ನು ಅಳವಡಿಸಿಕೊಂಡಲ್ಲಿ ಇದರಿಂದ ತಪ್ಪಿಸಿಕೊಳ್ಳಬಹುದು. ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿರುವ ಆಹಾರವನ್ನು ಸೇವಿಸಿದಲ್ಲಿ ಸ್ತನ ಕ್ಯಾನ್ಸರ್ ನಿಂದ ದೂರವಿರಬಹುದು.

ಬಾದಾಮ್ : ಇದರಲ್ಲಿರುವ ಫಾಇಟೋಕೆಮಿಕಲ್ಸ್ ಸೆಲೆನಿಯಂ ಸ್ತನಕ್ಯಾನ್ಸರ್ ನಿಂದ ದೂರವಿಡಲಿದೆ.

ಬೆಳ್ಳುಳ್ಳಿ : ಇದರಲ್ಲಿರುವ ಸಲ್ಫರ್ ಕಂಪೌಂಡ್ ಎಲಿಸಿನ್ ಸ್ತನ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ.

ದಾಳಿಂಬೆ : ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಮೀನು : ಇದರಲ್ಲಿ ಓಮೆಗಾ3 ಫೈಟಿ ಆ್ಯಸಿಡ್ಸ್, ವಿಟಾಮಿನ್ ಬಿ12 ಹೇರಳವಾಗಿರಲಿದ್ದು ಸ್ತನ ಕ್ಯಾನ್ಸರ್ ನಿಂದ ರಕ್ಷಿಸಲು ಮಹತ್ವಪೂರ್ಣದ್ದಾಗಿದೆ.

ಬ್ರೋಕಲಿ : ಇದರಲ್ಲಿ ಸಲ್ಫ್ರೋಫನೆ, ಇಂಡೋಲ್ಸ್ ನಂತಹ ಎಲಿಮೆಂಟ್ಸ್ ಗಳು ಹೇರಳವಾಗಿದ್ದು, ಗಡ್ಡೆಗಳಾಗುವುದನ್ನು ತಡೆಯಲಿದೆ.

ಕಾಳುಮೆಣಸು : ಫಾಯಿಟೊಕೆಮಿಕಲ್ಸ್ ಹೇರಳವಾಗಿದ್ದು, ಸ್ತನಕ್ಯಾನ್ಸರ್ ನಿಂದ ರಕ್ಷಿಸಲು ಉಪಯುಕ್ತವಾಗಿದೆ.

ಅರಿಶಿಣ : ಇದರಲ್ಲಿರುವ ಕರಕ್ಯೂಮಿನ್ ಕ್ಯಾನ್ಸರ್ ಕಣಗಳನ್ನು ನಾಶ ಮಾಡಿ, ಕ್ಯಾನ್ಸರ್ ಬರುವುದನ್ನು ತಡೆಯಲಿದೆ.

ಟೊಮ್ಯಾಟೋ : ಲಾಯಿಕೋಪಿನ್ ಸ್ತನ ಕ್ಯಾನ್ಸರ್ ಬರದಂತೆ ತಡೆಯಲಿದೆ.

ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ನ್ನು ತಡೆಯಲು ಇವುಗಳನ್ನು ನಿಮ್ಮ ಆಹಾರದಲ್ಲಿ ನಿತ್ಯ ಅಳವಡಿಕೊಂಡರೆ ಒಳ್ಳೆಯದು.  (ಎಸ್.ಎಚ್)

Leave a Reply

comments

Related Articles

error: