ಮೈಸೂರು

ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ನಿಲುಗಡೆ

ಮೈಸೂರು, ಸೆ. 16:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ 66/11 ಕೆವಿ ಜ್ಯೋತಿನಗರ, ರಾಜೀವ್‌ನಗರ ಮತ್ತು ದೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 18ರಂದು 2ನೇ ತ್ರೈಮಾಸಿಕ ಅವಧಿಯ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ
ಈ ಹಿನ್ನೆಲೆ ಜ್ಯೋತಿನಗರ ವಿ.ವಿ. ಕೇಂದ್ರದ ವ್ಯಾಪ್ತಿಯ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರದ 1ನೇ ಹಾಗೂ 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು
ರಾಜೀವ್‌ನಗರ ವಿ.ವಿ. ಕೇಂದ್ರದ ವ್ಯಾಪ್ತಿಯ ರಾಜೀವನಗರದ 2ನೇ ಹಾಗೂ 3ನೇ ಹಂತ, ಕ್ರಿಷ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್.ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಹೆಚ್.ಬಿ. ಬಡಾವಣೆ, ಆರ್‌ಟಿಓ-55, ಆಸೀನಾ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ದೂರ ವಿ.ವಿ. ಕೇಂದ್ರದ ವ್ಯಾಪ್ತಿಯ ದೂರ, ತಳೂರು, ಮುರುಡಗಳ್ಳಿ, ದೊಡ್ಡಕಾಟೂರು, ಚಿಕ್ಕ ಕಾಟೂರು ಹಾಗೂ ಸಿಂಧುವಳ್ಳಿ ಗ್ರಾಮದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಂದು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: