ಮೈಸೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮೈಸೂರು,ಸೆ. 16:-ಮೈಸೂರು-ಎಂ.ಎನ್.ಜಿ.ಟಿ ರೈಲು ನಿಲ್ದಾಣಗಳ ನಡುವೆ ಸೆಪ್ಟೆಂಬರ್ 15 ರಂದು ಸುಮಾರು 25-30 ವರ್ಷದ ಗಂಡಸಿನ ಶವ ಪತ್ತೆಯಾಗಿದೆ.
ಮೃತನ ಪಾರ್ಥಿವ ಶರೀರ ಮೈಸೂರಿನ ಕೆ.ಆರ್.ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದ್ದು. ಪೊಲೀಸ್ ಠಾಣೆಯಲ್ಲಿ ಕಲಂ-147ರ ಅನ್ವಯ ಪ್ರಕರಣ ದಾಖಲಾಗಿದೆ.
ಮೃತನ ಚಹರೆ ಇಂತಿದೆ: ಸುಮಾರು 5 ಅಡಿ, ಎಣ್ಣೆಗೆಂಪು ಮೈಬಣ್ಣ, ಸಾಧಾರಣವಾದ ಶರೀರ, ಅಗಲವಾದ ಕಿವಿಗಳು, ತಲೆಯಲ್ಲಿ ಸುಮಾರು 03 ಇಂಚು ಉದ್ದದ ಕಪ್ಪು ಕೂದಲು ಹಾಗೂ 01 ಇಂಚು ಉದ್ದ ಗಡ್ಡ-ಮೀಸೆ ಬಿಟ್ಟಿದ್ದು, ಹಸಿರು ಬಣ್ಣದ ರೌಂಡ್ ನೆಕ್ ಇರುವ ಅರ್ಧತೋಳಿನ ಟೀ ಶರ್ಟ್, ನೀಲಿ ಮತ್ತು ಬಿಳಿ ಬಣ್ಣದ ಬರ್ಮೂಡ ಚಡ್ಡಿಯನ್ನು ಧರಿಸಿರುತ್ತಾರೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ.ಸಂ 0821-2516579 ಸಂಪರ್ಕಿಸುವAತೆ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: