ಮೈಸೂರು

ತಾಯಿಯ ಸಾವಿನಿಂದ ಮನನೊಂದು ಪುತ್ರ ಆತ್ಮಹತ್ಯೆ

ಮೈಸೂರು,ಸೆ.17:-  ತಾಯಿಯ ಸಾವಿನಿಂದ ಮನನೊಂದು ಪುತ್ರನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣ ನಿವಾಸಿಯಾಗಿದ್ದ ಸುಜಾತಾ ಎಂಬವರು ಸೆಪ್ಟೆಂಬರ್ 15ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು.  ತಾಯಿಯ ಸಾವಿನಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ 29ರ ಹರೆಯದ ಪುತ್ರ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು   ಮೂಲಗಳು ತಿಳಿಸಿವೆ.

ತಾಯಿಯ ಅಂತ್ಯಕ್ರಿಯೆಯ ಬಳಿಕ ಅರ್ಜುನ್ ನಾಪತ್ತೆಯಾಗಿದ್ದ. ಇಂದು ಅರಸನಕೆರೆ ಮುಖ್ಯ ಸೇತುವೆ ಬಳಿ ಶವ ಪತ್ತೆಯಾಗಿದೆ. ತಾಯಿ ಅಗಲಿಕೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,   ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: