ಮೈಸೂರು

ಟ್ರ್ಯಾಕ್ಟರ್ ಡಿಕ್ಕಿ : ಬೈಕ್ ಸವಾರ ಸಾವು

ಮೈಸೂರು,ಸೆ.17:-  ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ.

ಮೃತನನ್ನು  ಕಾರಾಪುರ ಗ್ರಾಮದ ನಿವಾಸಿ ಸೋಮನಾಯ್ಕ(48) ಎಂದು ಗುರುತಿಸಲಾಗಿದೆ. ಕಾರಾಪುರ ಜಂಗಲ್ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಮನಾಯ್ಕ ಅವರು ಹೆಚ್.ಡಿ.ಕೋಟೆಯಿಂದ ಜಂಗಲ್ ರೆಸಾರ್ಟ್ ​ಗೆ ಆಗಮಿಸುತ್ತಿದ್ದ ವೇಳೆ ಈ  ಅಪಘಾತ ಸಂಭವಿಸಿದೆ.   ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: