ಮೈಸೂರು

ಅಧಿಕಾರಿಗಳು ಮಾಡುವ ಲೋಪಕ್ಕೆ ಜನಪ್ರತಿನಿಧಿಗಳು ಹೊಡೆದಾಡುವುದು ಬೇಡ : ಸಂಸದ ಪ್ರತಾಪ್ ಸಿಂಹ

ಮೈಸೂರು,ಸೆ.17:- ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ  ಆರೋಪ – ಪ್ರತ್ಯಾರೋಪ ಶುರುವಾಗಿದೆ. ಅಧಿವೇಶನ ಶುರುವಾಗಿದೆ. ಬಿಜೆಪಿ ವಿರುದ್ಧ ದೋಷಾರೋಪಣೆ ಯಲ್ಲಿ ಕಾಲ ಕಳೆಯಬೇಡಿ. ಸಿದ್ದರಾಮಯ್ಯ ಅವರ ಆಡಳಿತದಲ್ಲೂ ಐಎಎಸ್ ಅಧಿಕಾರಿಗಳು ಅವರನ್ನು ಮಿಸ್ ಲೀಡ್ ಮಾಡಿದ್ದಾರೆ. ಕೋರ್ಟ್ ತೀರ್ಪನ್ನು  ತಪ್ಪಾಗಿ ಅರ್ಥೈಸಿದವರು ಯಾರು ಎಂಬುದನ್ನು ಅರಿತು ಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ದೇಗುಲ ತೆರವಿನ ನಂತರ ಎದ್ದಿರುವ ವಿಚಾರದ ಬಗ್ಗೆ ಮಾತಾಡುತ್ತಿದ್ದೇನೆ. ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತಾಡೋದಲ್ಲ. ಇದು ತಾರ್ಕಿಕ ಅಂತ್ಯ ಕಾಣಬೇಕಾದರೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ ಇದನ್ನು ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗಲೂ ಮಿಸ್ ಲೀಡ್ ಆಗಿದೆ. ಇಲ್ಲಿ ಅಧಿಕಾರಿಗಳು ನಿಮಗೆ ಹೇಗೆ ಮಿಸ್ ಲೀಡ್ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಕುರಿತು ಕೆಡಿಪಿ ಸಭೆಯಲ್ಲಿ ಕೂಡ  ನಾನು ಮಾತಾಡಿದ್ದೆ. ಆ ವೇಳೆ ಜಿಲ್ಲಾಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ಇದೆ ಎಂದರು. ಆದರೆ ಮೊದಲು ಸುಪ್ರೀಂಕೋರ್ಟ್‌ನ ಆದೇಶ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದಿದ್ದೆ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಮತ್ತೆ  ಪ್ರಸ್ತಾಪಿಸಿದರು.

ಎಲ್ಲಾ ಸರ್ಕಾರಗಳಿಂದ ಈ ತಪ್ಪು ಆಗಿದೆ. ಆದರೆ ಇದರ ನೇತೃತ್ವ ಸರ್ಕಾರದ ಅಧಿಕಾರಿಗಳು ವಹಿಸಬೇಕು. ಆದರೆ ಸಿದ್ದರಾಮಯ್ಯನವರಿಗೆ ಈಗ ಪ್ರೀತಿ ಬಂದಿದೆ. ನಿಮಗೆ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ. ಈ ಪ್ರೀತಿ ಲಿಂಗಾಯತರನ್ನ ಒಡೆದು ರಾಜಕಾರಣ ಮಾಡುವಾಗ ಗೊತ್ತಿರ್ಲಿಲ್ವ.? ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ‌  ನಿಮಗೆ ಕೋರ್ಟ್ ಆದೇಶ ಗೊತ್ತಾಗಲಿಲ್ವ ಸಿದ್ದರಾಮಯ್ಯನವರೇ ಎಂದು ವ್ಯಂಗ್ಯವಾಡಿದರು.

ಇಡೀ ಆಡಳಿತಾತ್ಮಕ ಚುಕ್ಕಾಣಿಯನ್ನು ಅಧಿಕಾರಿಗಳಿಗೆ ಕೊಡುತ್ತೇವೆ.  ಯಾಕಂದರೆ ಆಡಳಿತ ವಿಚಾರದಲ್ಲಿ ಇವರಿಗೆ ಎಲ್ಲವೂ ತಿಳಿದಿರುತ್ತೆ. ಇವರು ಐಎಎಸ್‌ಗಳಾಗಿ ಎಲ್ಲವನ್ನು ತಿಳಿದಿರುತ್ತಾರೆ ಅಂತ‌. ಹಾಗಂತ ಇದನ್ನು ಸರ್ಕಾರಕ್ಕೆ ಅಥವಾ ರಾಜಕಾರಣಿಗಳಿಗೆ ಅರ್ಥೈಸಿಕೊಳ್ಳಬೇಕು.ದೇಗುಲ ಒಡೆಯುವ ಮುನ್ನ ಮಾಹಿತಿ ನೀಡಬೇಕು. ಅಧಿಕಾರಿಗಳು ಮಾಡಿದ ಈ ಗೊಂದಲಕ್ಕೆ ನೀವು ಮೈಮೇಲೆ ಎಳೆದುಕೊಳ್ಳಬೇಡಿ. ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳಬೇಡಿ ಎಂದರು.

ಸಿದ್ದರಾಮಯ್ಯನವರ ಆಡಳಿತದಲ್ಲಿ ಕೋರ್ಟ್‌ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. 2018 ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ‌ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಆಗ ಬಿಜೆಪಿ ಸರಕಾರ ಇತ್ತು, ಆವತ್ತು ಅಧಿಕಾರಿಗಳು ತಪ್ಪು ಮಾಡಿದರು. ಬಿಜೆಪಿ ಆಡಳಿತದಲ್ಲೂ ಆ ತಪ್ಪು ನಡೆಯಿತು. ನಿಮ್ಮ ಅಧಿಕಾರದಲ್ಲೂ ಆ ತಪ್ಪು ಮುಂದುವರಿಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ‌. ರಾಜಕಾರಣಿ ಗಳು ಅಧಿಕಾರಿಗಳು ಮಾಡುವ ತಪ್ಪನ್ನು ತಮ್ಮ ಮೇಲೆ ಎಳೆದುಕೊಳ್ಳಬೇಡಿ. ಸಿದ್ದರಾಮಯ್ಯ ಅವರೇ ನೀವು ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನೂ ನಿಮ್ಮ ಆಡಳಿತದಲ್ಲಿ ಮಾಡಲಿಲ್ಲ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ಓಟಿಗಾಗಿ ವೀರಶೈವ – ಲಿಂಗಾಯತ ಜಾತಿ ಒಡೆಯುತ್ತಿರಲಿಲ್ಲ. ಅಧಿಕಾರಿಗಳು ಮಾಡುವ ಲೋಪಕ್ಕೆ ಜನಪ್ರತಿನಿಧಿಗಳು ಹೊಡೆದಾಡುವುದು ಬೇಡ ಎಂದರು.

ಸುಪ್ರೀಂಕೋರ್ಟ್ ಆದೇಶವನ್ನು   ತಪ್ಪಾಗಿ ಅರ್ಥೈಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಿ.  ಮೈಸೂರು ಜಿಲ್ಲಾಧಿಕಾರಿಗಳನ್ನು ದೇವಸ್ಥಾನ ತೆರವಿನ ವಿಚಾರದಲ್ಲೂ ವಿವರಣೆ ಕೇಳಲಾಗಿದೆ.  ನಾನು ಗೋಸುಂಬೆ ರಾಜಕಾರಣ  ಮಾಡಲು ಬಂದಿಲ್ಲ. ರಾಜೀನಾಮೆಯನ್ನು ತಹಶೀಲ್ದಾರ್ ಗೆ ಕೊಟ್ಟು ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಕಾವೇರಿ ಹೋರಾಟದ ವಿಚಾರದಲ್ಲೂ ಕೆಲವರು ತಹಶೀಲ್ದಾರ್ ಗೆ ರಾಜೀನಾಮೆ ಕೊಟ್ಟು ನಾಟಕ ಮಾಡಿದ್ದಾರೆ. ನನಗೆ ಅಂತ ರಾಜಕಾರಣ ಗೊತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಗಿರಿಧರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: