ಮೈಸೂರು

ರಾಷ್ಟ್ರೀಯ ನಿರುದ್ಯೋಗ ದಿನವೆಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್

ಮೈಸೂರು,ಸೆ.17:- ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾಗಿದ್ದು, ಕಾಂಗ್ರೆಸ್ ನಿರುದ್ಯೋಗ ದಿನವಾಗಿ ಆಚರಿಸುತ್ತಿದೆ. ಇಂದು ಮೈಸೂರು ನ್ಯಾಯಾಲಯದ ಮೈಸೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ  ನಿರುದ್ಯೋಗಿಗಳ ಪರವಾಗಿ ರಾಷ್ಟ್ರೀಯ ನಿರುದ್ಯೋಗ ದಿವಸವೆಂದು ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಸರ್ಕಾರವು  ವರ್ಷಕ್ಕೆ 2ಕೋಟಿ ಉದ್ಯೋಗ ನೀಡುತ್ತೇವೆಂದು ಯುವಕರಿಗೆ ಭರವಸೆ ನೀಡಿತ್ತು. 2013-14ರಲ್ಲಿ ಸುಮಾರು 4.2 ಇದ್ದ ನಿರುದ್ಯೋಗದ ಸಮಸ್ಯೆ ಇಂದು 2020-21ರಲ್ಲಿ 10.3% ಕ್ಕೆ ಏರಿಕೆಯಾಗಿದೆ. ಸೆಂಟರ್ ಆಫ್ ಮಾನಿಟರಿ ಇಂಡಿಯನ್ ಏಕನಾಮಿಕ್ ಪ್ರಕಾರ ಏಳು ವರ್ಷವಾದರೂ ಉದ್ಯೋಗ ನೀಡದ ಕಾರಣ ಯುವಕರಿಗೆ ಬೇಸರವಾಗಿದೆ ಎಂದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರೀಸ್ ಸೇರಿದಂತೆ ಯುವಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

comments

Related Articles

error: