ಕರ್ನಾಟಕಪ್ರಮುಖ ಸುದ್ದಿಮೈಸೂರು

ಸುತ್ತೂರು ಶಾಖಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ

ಮೈಸೂರು,ಸೆ.17:- ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯುಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ   ಭೇಟಿ ನೀಡಿದರು.

ಮಠದ ವತಿಯಿಂದ ಯಡಿಯೂರಪ್ಪ ಅವರನ್ನು ಪೂರ್ಣಕುಂಭದೊಂದಿಗೆ  ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಪದವಿ ತ್ಯಾಗದ ನಂತರ ಮೈಸೂರಿಗೆ ಇದೇ ಮೊದಲ ಭೇಟಿಯಾಗಿದೆ. ಇದೇ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಯಡಿಯೂರಪ್ಪನವರಿಗೆ ಶಾಸಕ ಎಸ್‌.ಎ.ರಾಮ್‌ದಾಸ್, ಮಾಜಿ ಸಚಿವ ವಿಜಯಶಂಕರ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಸಾಥ್ ನೀಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ವಿಜಯೇಂದ್ರ ಸದ್ಯಕ್ಕೆ ಯಾವುದೇ ಉಪ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ಅವರು ಯಾವ ಕ್ಷೇತ್ರದಲ್ಲಿ ಮುಂದೆ ನಿಲ್ಲುತ್ತಾರೆ ಅನ್ನೋದು ನಿರ್ಧಾರವಾಗಿಲ್ಲ. ಸದ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ನಾನು ಮತ್ತು ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಷನ ಮುಗಿಯಲಿ 15 ದಿನಗಳ ನಂತರ ಈ‌ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಬಸವರಾಜ್ ಬೊಮ್ಮ ಉತ್ತಮ ಆಡಳಿತ ನೀಡುತ್ತಿದ್ದಾರೆ ಅನ್ನೋದು ನನ್ನ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯವೂ ಅದೇ ಇದೆ. ಮುಂದಿನ ದಿನದಲ್ಲಿ ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಜಗತ್ತೇ ಅಚ್ಚರಿ ಪಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ದೂರದೃಷ್ಟಿ ದೇಶದ ಪ್ರಗತಿಗೆ ಪೂರಕವಾಗಿದೆ ಎಂದರು.

ದೇವಾಲಯಗಳ ತೆರವು ಕುರಿತು ಪ್ರತಿಕ್ರಿಯಿಸಿ ದೇವಾಲಯ ತೆರವು ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ತೆರವುಗೊಳಿಸದಂತೆ ಸೂಚನೆ‌ ನೀಡಿದ್ದಾರೆ. ಈ ಬಗ್ಗೆ ಮೊದಲು ಚರ್ಚೆ ಮಾಡಬೇಕಿತ್ತು. ಯಾವುದೇ ಕಾರಣಕ್ಕೂ ದೇಗುಲ ತೆರವು ಮಾಡದಂತೆ ಆಗ್ರಹ ಮಾಡ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಯುಗ ಉತ್ಸವ ಕಾರ್ಯಕ್ರಮ ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಶಾಸಕ ರಾಮದಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ಮೋದಿಯವರ ದೂರ ದೃಷ್ಟಿಯಿಂದ ಇಡಿ ಜಗತ್ತೇ ಅಚ್ಚರಿ ಆಗುವ ರೀತಿಯಲ್ಲಿ ದೇಶ ಮುನ್ನಡೆಯತ್ತ ಸಾಗುತ್ತಿದೆ. ಅವರ ನೇತೃತ್ವ ಜಗತ್ತಿನಲ್ಲಿ ಅವರ ಆಡಳಿತ ಅಚ್ಚಳಿಯದಂತೆ ದೊಡ್ಡ ಸಾಧನೆ ಮಾಡಿ ತೋರಿಸಿದ್ದಾರೆ. ಮುಂದುವರೆದ ದೇಶವನ್ನಾಗಿ ಮಾಡುವ ಶಕ್ತಿ ಅವರಲ್ಲಿ ಇದೆ. ಆ ರೀತಿ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇನ್ನೊಮ್ಮೆ ಮೋದಿ ಈ ದೇಶದ ಪ್ರಧಾನಿಯಾಗಿವುದು ನಮ್ಮ ಅಪೇಕ್ಷೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: