ಮೈಸೂರು

ಬಾಕ್ಸಿಂಗ್ ಚಾಂಪಿಯನ್ ಶಿಪ್ -2021 ರಲ್ಲಿ ಬಿಬಿ ಫಾತಿಮಾಗೆ ಚಿನ್ನ

ಮೈಸೂರು,ಸೆ.17:- ಅರ್ಬನ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಅರ್ಬನ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ವರ್ಲ್ಡ್ ಅರ್ಬನ್ ಗೇಮ್ಸ್ ಫೆಡರೇಷನ್ ವತಿಯಿಂದ  ಗೋವಾದಲ್ಲಿ ನಡೆದ ಕರ್ನಾಟಕ ಅರ್ಬನ್ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2021 ರಲ್ಲಿ ಮೈಸೂರಿನ ಬಿಬಿ ಫಾತಿಮಾ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದು ಹೆಮ್ಮೆ ತಂದಿದ್ದಾಳೆ.

ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿ ನಡೆಸಿ ಬಿಬಿ ಫಾತಿಮಾ ಎಸ್. ಪೋಷಕರಾದ ಮಂಗಳಮುಖಿ ಅಕ್ರಂ ಪಾಷಾ ಮಾಹಿತಿ ನೀಡಿ ಈ ಸ್ಪರ್ಧೆಯಲ್ಲಿ ಸುಮಾರು 70-80 ಆಟಗಾರರು ಭಾಗವಹಿಸಿದ್ದರು. ಮೈಸೂರಿನ ಎಲೈಟ್   ಅಕಾಡೆಮಿ, ಮೈಸೂರು ಯೂನಿವರ್ಸಿಟಿ ಹಾಗೂ ಹುಣಸೂರು, ಬೆಂಗಳೂರು ಟೀಮ್ ಗಳು ಭಾಗವಹಿಸಿತ್ತು. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಯಾಗಿತ್ತು ಎಂದರು.

15ರ ಹರೆಯದ ಬಿಬಿ ಫಾತಿಮಾ ಇದೇ ಮೊದಲ ಬಾರಿಗೆ ಸ್ಪರ್ಧಿಸಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಗೆಲುವಿಗೆ ಕಾರಣರಾದ ಕೋಚ್ ಫರ್ಜತ್ ಅಲಿಯಾಸ್ ಲಿಯಾಜ್, ರೋಟರಿ ಸಂಘಸಂಸ್ಥೆಗಳು, ಗಣ್ಯರು, ದಾನಿಗಳಿಗೆ ಧನ್ಯವಾದಗಳು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: