ಮೈಸೂರು

ಪ್ರಾಣಿ – ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು, ಸೆ. 17:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ಕೆ. ಸ್ಪಂದನ ಅವರು 1,000 ರೂ.ಗಳನ್ನು ಪಾವತಿಸಿ ಲವ್ ಬರ್ಡ್, ಮಂಡ್ಯದ ಎಂ.ಕೆ ವಿಶ್ವನಾಥ 2,000 ರೂ.ಗಳನ್ನು ಪಾವತಿಸಿ ಲವ್ ಬರ್ಡ್-2 ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯದ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: