
ಮೈಸೂರು
ಸಿಡಿಲ ಬಡಿತಕ್ಕೆ ಸಿಡಿಮದ್ದು ಸ್ಪೋಟ : ಮೂವರ ಸಾವು
ಸಿಡಿಲು ಬಡಿತಕ್ಕೆ ಸಿಡಿಮದ್ದು ಸ್ಪೋಟಗೊಂಡು ತಂದೆ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.
ಮೃತರನ್ನು ಜಗದೀಶ, ಮಗ ಪುನೀತ್, ಮತ್ತು ನಾಗರಾಜು ಎಂದು ಗುರುತಿಸಲಾಗಿದೆ. ಇವರು ಹಾಸನ ತಾಲೂಕು ಕಟ್ಟಾಯ ಬಳಿ ಕ್ವಾರೆಯಲ್ಲಿ ಕೆಲಸ ಮಾಡುವಾಗ ಈ ದುರಂತ ಸಂಭವಿಸಿದೆ. ಗುಡುಗು ಸಿಡಿಲಿನ ರಭಸಕ್ಕೆ ಕಲ್ಲು ಕ್ವಾರಿಯಲ್ಲಿದ್ದ ಜಿಲೆಟಿನ್ ಕಡ್ಡಿ ಸಿಡಿದು ಮೂವರು ಸಾವನ್ನಪ್ಪಿದ್ದಾರೆ. ಬಂಡೆ ಸಿಡಿಸಲು ಜಿಲೆಟಿನ್ ಕಡ್ಡಿಯನ್ನು ಅಳವಡಿಸಲಾಗಿತ್ತು. ನಿನ್ನೆ ಮಳೆ ವೇಳೆ ಮಿಂಚು ಗುಡುಗಿನ ರಭಸಕ್ಕೆ ಸಿಡಿಮದ್ದು ಸಿಡಿದಿದೆ. ತಕ್ಷಣ ಈ ದುರಂತ ನಡೆದಿದೆ.
ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)