
ಮೈಸೂರು
ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ : ವ್ಯಕ್ತಿಯ ಬಂಧನ
ಮೈಸೂರು, ಸೆ.17:- ಸ್ಟಾರ್ ನಟರೋರ್ವರ ತೋಟದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದ್ದು,ವ್ಯಕ್ತಿ ಯನ್ನು ಪೊಲೀ ಸರು ಬಂಧಿಸಿದ್ದಾರೆ.
ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ತೋಟದಲ್ಲಿ
ಪ್ರಾಣಿಗಳನ್ನ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಅತ್ಯಾಚಾರ ನಡೆ ದಿದೆ. ತೋಟದಲ್ಲೆ ವಾಸವಿದ್ದ ಕುಟುಂಬಕ್ಕೆ ಸೇರಿದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಕ್ಸೋ ಕಾಯ್ದೆ ಹಿನ್ನೆಲೆಯಲ್ಲಿ ಸ್ಥಳದ ಮಾಹಿತಿ ಹಾಗೂ ಇತರೆ ಎಲ್ಲಾ ಮಾಹಿತಿ ಗೌಪ್ಯವಾಗಿಡಲಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)