ಕರ್ನಾಟಕಪ್ರಮುಖ ಸುದ್ದಿ

ಒಂದೇ ಕುಟುಂಬದ ಐವರ ಆತ್ಮಹತ್ಯೆ

ರಾಜ್ಯ(ಬೆಂಗಳೂರು)ಸೆ.18:-  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಪತ್ರಿಕೆಯೊಂದರ ಸಂಪಾದಕ  ಹಲ್ಲಗೇರಿ ಶಂಕರ್ ಕುಟುಂಬದ ಜೊತೆ  ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದೆ ಬಗ್ಗೆ  ಶಂಕರ್ ಅಸಮಧಾನಗೊಂಡಿದ್ದರು. ಕಳೆದ ಐದು ದಿನಗಳಿಂದ ಮನೆಗೆ ಬಂದಿರಲಿಲ್ಲ. ಗುರುವಾರ  ಮನೆಗೆ ಬಂದು ವಾಪಸ್ ಹೋಗಿದ್ದರು. ಬೀಗ ಹಾಕಿದ್ದನ್ನು ಗಮನಿಸಿ ಸ್ನೇಹಿತರ ಮನೆಗೆ ಹೋಗಿರಬಹುದೆಂದು ವಾಪಸ್ ಹೋಗಿದ್ದರು. ಶುಕ್ರವಾರ ಮತ್ತೆ ಮನೆಗೆ ಬಂದು ಬೀಗ ಒಡೆದು ಒಳ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಎಲ್ಲರೂ ಸೀರೆಗಳಲ್ಲಿ ನೇಣು ಹಾಕಿಕೊಂಡಿದ್ದರು. ಪವಾಡದಂತೆ ಐದು ದಿನ ಕಳೆದರೂ ಆಹಾರವಿಲ್ಲದಿದ್ದರೂ  ಹೆಣ್ಣು ಮಗು ಪ್ರೇಕ್ಷಾ ಬದುಕುಳಿದಿದೆ. ಕಳೆದ ಐದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇಬ್ಬರು ಕಂದಮ್ಮಗಳ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ  ಒಂದು ಒಂಭತ್ತು ತಿಂಗಳ ಗಂಡು ಮಗು ಮಾತ್ರ ಹಸಿವಿನಿಂದ ಮೃತಪಟ್ಟಿದೆ. ಮತ್ತೊಂದು ಹೆಣ್ಣು ಮಗು ಪವಾಡದಂತೆ ಬದುಕುಳಿದಿದೆ. ಐದು ದಿನದಿಂದ ಹಸಿವಿನಿಂದ ಸುಸ್ತಾಗಿ ಬಳಲಿದೆ.

ಶಂಕರ್ ಅವರ ಚಿಕ್ಕ ಮಗಳು ಹಾಗೂ ಗಂಡನ ನಡುವೆ ಜಗಳ ನಡೆಯುತ್ತಿತ್ತು ಈ ಹಿಂದೆ ಕೂಡ ಚಿಕ್ಕ ಮಗಳು ಅತ್ಮಹತ್ಯೆಗೆ ಯತ್ನಿಸಿದ್ದಳು. ಇಬ್ಬರನ್ನ ಠಾಣೆಗೆ ಕರೆದು ರಾಜಿ ಸಂಧಾನ ಮಾಡಲಾಗಿತ್ತು. ಶಂಕರ್ ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದರು ಶಂಕರ್ ಮರಳಿ ಬಂದಾಗ ಮನೆಯಿಂದ ಕೆಟ್ಟ ವಾಸನೆ ಮೂಗಿಗೆ ರಾಚಿದೆ. ಕಿಟಕಿ ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತ್ಮಹತ್ಯೆ ದುರಂತದ ನಡುವೆ  ಕಂದಮ್ಮ ಒಂದು ಬದುಕುಳಿದಿದೆ. ಆದರೆ  ಅದ್ರಲ್ಲಿ 3 ವರ್ಷದ ಮಗು ಪ್ರೇಕ್ಷಾ ಅದೃಷ್ಟವಶಾತ್ ಪಾರಾಗಿದ್ದು, ಐದು ದಿನಗಳ ಕಾಲ ಹೆಣದ ನಡುವೆ ಈ ಮುಗುವಿತ್ತು.  ಅನ್ನ ನೀರು ಇಲ್ಲದೇ ಸಾವಿನ ಮನೆಯಲ್ಲೇ ಮಗುವಿತ್ತು. ಆತ್ಮಹತ್ಯೆ ಸ್ಥಳದಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಈ ಕುಟುಂಬದವರು ಮಂಡ್ಯದ ಹಲಗೇರಿಯವರು. ಪಶ್ಚಿಮ‌ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: