ಮೈಸೂರು

ಸ್ಟಾರ್ ನಟ ದರ್ಶನ್ ಗೆ ಸೇರಿದ ತೋಟದಲ್ಲಿ ತೆಂಗಿನಕಾಯಿ ಕಳುವು : ದೂರು

ಮೈಸೂರು,ಸೆ.18:- ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಸೇರಿದ ಟಿ.ನರಸೀಪುರ ತಾಲೂಕಿನ‌ ಕೆಂಪಯ್ಯನಹುಂಡಿಯಲ್ಲಿರುವ ತೋಟದಲ್ಲಿ ತೆಂಗಿನಕಾಯಿ ಕಳ್ಳತನವಾಗಿದೆ. ಸುಮಾರು 10 ಸಾವಿರ ರೂ. ಮೌಲ್ಯದ  ತೆಂಗಿನಕಾಯಿ ಕಳ್ಳತನವಾಗಿರುವ ಕುರಿತು  ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಾರ್ಮ್ ಹೌಸ್ ನೋಡಿಕೊಳ್ಳುವ ಸ್ವಾಮೀಗೌಡ ಎಂಬವರು ದೂರು ನೀಡಿದ್ದು, ತೋಟದಲ್ಲಿ 400 ತೆಂಗಿನ ಮರಗಳಿವೆ. ಪ್ರತಿದಿನ 300 ಕಾಯಿಗಳು ಮರದಿಂದ ಬೀಳುತ್ತಿದ್ದವು. ಆದರೆ ನಿನ್ನೆ ತೋಟದಲ್ಲಿ ಇದ್ದ ಮರದ ಕೆಳಗೆ ತೆಂಗಿನಕಾಯಿಗಳನ್ನು ತೆಗೆಯಲು ನೋಡಿದಾಗ ಕಾಯಿಗಳು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತೋಟದಲ್ಲೇ ಕೆಲಸ‌ಮಾಡುವ ನಾಗರಾಜ್, ನಜೀಮ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: