ಮೈಸೂರು

ದೇವಾಲಯ ತೆರವು ಕಾರ್ಯಾಚರಣೆ ಶಾಶ್ವತವಾಗಿ ತಡೆಯುವಂತೆ ಒತ್ತಾಯ

ಮೈಸೂರು,ಸೆ.18:- ಮೈಸೂರಿನಲ್ಲಿ ದೇವಾಲಯ ತೆರವು ಕಾರ್ಯಾಚರಣೆಗೆ ಮುಂದಾದ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಎಚ್ಚರಿಕೆ ರವಾನಿಸಲು   ನಗರದ ಭನಶಂಕರಿ ದೇವಾಲಯದ ಮುಂದೆ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಎಚ್ಚರಿಕೆಯ ಅಭಿಯಾನವನ್ನು ಆಯೋಜಿಸಲಾಗಿತ್ತು.

ಅಭಿಯಾನದ ನಂತರ “ಇನ್ನು ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಕಲ್ಲನ್ನೂ ಸಹ ಮುಟ್ಟಲು ಬಿಡುವುದಿಲ್ಲ ಯಾವುದೇ ಪಕ್ಷ ಭೇದವಿಲ್ಲದೆ ಹಿಂದುತ್ವಕ್ಕಾಗಿ ಹೋರಾಡುತ್ತೇವೆ. ಹಿಂದುತ್ವ ಎಂಬುದು ತಾಯಿಗೆ ಸಮ” ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು. ಈಗ ತಾತ್ಕಾಲಿಕವಾಗಿ ದೇವಾಲಯ ತೆರವು ಮಾಡುವ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಆದರೆ  ಶಾಶ್ವತವಾಗಿ ಈ ಕಾರ್ಯಾಚರಣೆಯನ್ನು ತಡೆಯಬೇಕೆಂದು  ಒತ್ತಾಯಿಸಲಾಯಿತು.

ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ  “ಅಧಿಕಾರಿಗಳು ಏಕಾ ಏಕಿ ಹಿಂದೂಗಳ ದೇವಾಲಯವನ್ನು ಧ್ವಂಸ ಮಾಡಿರುವುದು ಖಂಡನೀಯ.  ಅಧಿಕಾರಿಗಳಿಗೆ ಹಿಂದೂಗಳೆಂದರೆ ತಾತ್ಸಾರ ಯಾಕೆ? ಯಾವುದಾದರೂ ಒಂದು ಮಸೀದಿಯನ್ನು ಅಥವಾ ಚರ್ಚನ್ನಾಗಲಿ ತೆರವು ಮಾಡುವ ಪ್ರಯತ್ನ ಮಾಡಿದ್ದಾರಾ ? ಕೇವಲ ಒಂದು ಧರ್ಮವನ್ನು ಗುರಿ ಇಡುವುದು ಎಷ್ಟು ಸರಿ? ಇದೇ ರೀತಿ ದೇವಾಲಯಗಳನ್ನು ಒಡೆದು ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ತೀವ್ರ ಸ್ವರೂಪದ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ ಎಂದರು.

ಅಭಿಯಾನದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ್, ತೇಜಸ್, ಗಗನ್, ವಿನಯ್, ಚೇತು, ಮಲ್ಲೇಶ್, ಮಹೇಶ್, ಪವನ್ ಸೋಮು, ಚಂದನ್, ಮನೋಜ್, ಶಶಾಂಕ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: