ಮೈಸೂರು

ಮೂರು ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಮುಡಾ

ಮೈಸೂರು, ಸೆ.19:-  ಮೈಸೂರು ತಾಲ್ಲೂಕು ಕಸಬಾ ಹೋಬಳಿ ದೇವನೂರು ಗ್ರಾಮ ಸರ್ವೆ ನಂ-168/2ರಲ್ಲಿ ಪ್ರಾಧಿಕಾರದಿಂದ ದೇವನೂರು 3ನೇ ಹಂತ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಈ ಪೈಕಿ 27 ಗುಂಟೆ ಜಮೀನಿನಲ್ಲಿ  ನಾಗರಾಜು ಬಿನ್ ಬಸವಯ್ಯ ಎಂಬವರು ಅನಧಿಕೃತವಾಗಿ ತಂತಿ ಬೇಲಿ ಅಳವಡಿಸಿಕೊಂಡಿದ್ದರು.

ಆಯುಕ್ತರಾದ ಡಾ.ಡಿ.ಬಿ.ನಟೇಶ್‌ ಅವರ ನಿರ್ದೇಶನದಂತೆ ಸದರಿ ಜಾಗದಲ್ಲಿ ಅನಧಿಕೃತವಾಗಿ ಅಳವಡಿಸಿಕೊಂಡಿದ್ದ ತಂತಿಬೇಲಿಯನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಸದರಿ ಸ್ವತ್ತಿನ ಅಂದಾಜು ಮೌಲ್ಯ 3.00 ಕೋಟಿ ರೂ. ಗಳಾಗಿರುತ್ತದೆ.

ಈ ಸಂದರ್ಭದಲ್ಲಿ ವಲಯಾಧಿಕಾರಿ  ಹೆಚ್.ಪಿ.ಶಿವಣ್ಣ ಹಾಗೂ ಸಹಾಯಕ ಅಭಿಯಂತರಾದ  ರಾಜಶೇಖರ್‌  ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: