ಕರ್ನಾಟಕಪ್ರಮುಖ ಸುದ್ದಿಮೈಸೂರು

ಉ ಚ್ಚಗಣಿಯ ಮಹದೇವಮ್ಮ ದೇವಸ್ಥಾನದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಸಿಎಂ ಬರುವ ಭರವಸೆ: ಸಂಸದ ಪ್ರತಾಪ್ ಸಿಂಹ

ಮೈಸೂರು, ಸೆ.19:-“ನಂಜನಗೂಡಿನ‌ ಉ ಚ್ಚಗಣಿಯ ಮಹದೇವಮ್ಮ ದೇವಸ್ಥಾನದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಾಗಿ ಸಿ ಎಂ ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಮೈಸೂರು ಸೇರಿದಂತೆ ರಾಜ್ಯದ ಹಿಂದೂ ದೇವಾಲಯಗಳ ರಕ್ಷಣೆ ವಿಚಾರದಲ್ಲಿ ದಾವಣಗೆರೆ ಯಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕಾರಿಣಿ ವೇಳೆ ಅನೌಪಚಾರಿಕ ವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.
ಈ ಮಾತುಕತೆ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಕುಮಾರ್ , ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಭಗವಾನ್ ಖೂಬಾ, ನಾರಾಯಣಸ್ವಾಮಿ ಕೂಡ ಹಾಜರಿದ್ದರು. ಈ ವೇಳೆ ಸಿಎಂ ನನ್ನ ಜೊತೆ ಮಾತನಾಡಿ, ರಾಜ್ಯದ ಹಿಂದೂ ದೇವಾಲಯಗಳ ರಕ್ಷಣೆ ವಿಚಾರದಲ್ಲಿ ಸರಕಾರ ಬದ್ಧತೆ ಹೊಂದಿದೆ. ಕೇವಲ ಬಾಯಿ ಮಾತಿನಲ್ಲಿ ನಮ್ಮ ಬದ್ಧತೆ ಪ್ರದರ್ಶಿಸದೆ ಕಾನೂನಾತ್ಮಕ ವಾಗಿ ದೇವಸ್ಥಾನ ಗಳ ರಕ್ಷಣೆಗೆ ಸರಕಾರ ಮುಂದಾಗಲಿದೆ. ಒಂದೆರಡು ದಿನದಲ್ಲಿ ಕಾನೂನಿನ ವಿವರವನ್ನು ರಾಜ್ಯದ ಜನರಿಗೆ ತಿಳಿಸಲಿದ್ದೇನೆ ಎಂದು ಹೇಳಿದರು. ಅಲ್ಲದೆ, ತೆರವು ಮಾಡಲಾಗಿರುವ ಮೈಸೂರಿನ ನಂಜನಗೂಡಿನ‌ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ವನ್ನು ಮೂಲ ಇದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಪುನರ್ ನಿರ್ಮಾಣ ಕೂಡ ಮಾಡಲಾಗುವುದು. ಈ ದೇವಸ್ಥಾನ ನಿರ್ಮಾಣದ ಶಂಕುಸ್ಥಾಪನೆಗೂ ತಾವು ಬರುವುದಾಗಿ ತಿಳಿಸಿದ್ದಾರೆ. ಸರಕಾರ ಈ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಲು ಕಾನೂನಾತ್ಮಕ ವಾಗಿ ಸಾಧ್ಯವಿಲ್ಲದೆ ಇದ್ದರೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಒಟ್ಟುಗೂಡಿ ಜೊತೆಗೆ ಜನರಿಂದಲ್ಲೂ ದೇಣಿಗೆ ಸಂಗ್ರಹಿಸಿ ದೇವಸ್ಥಾನ ವನ್ನು ತುಂಬಾ ವೈಭವಯುತವಾಗಿ ಪುನರ್ ನಿರ್ಮಿಸಲಾಗುವುದು. ಸಿಎಂ ಅವರು ಇಂದು ಭರವಸೆ ನೀಡುವ ಮೂಲಕ ಅಧಿಕಾರಿಗಳ ಅಜ್ಞಾನ ದಿಂದ ರಾಜ್ಯದ 4 ಸಾವಿರಕ್ಕೂ ಹೆಚ್ಚು ದೇವಸ್ಥಾನ ಗಳ ಮೇಲೆ ಕವಿದಿದ್ದ ಆತಂಕದ ಛಾಯೆ ನಿವಾರಣೆಯಾಗಿದೆ. ಸಿಎಂ ಅವರ ಈ ಮಾತಿಗೆ ರಾಜ್ಯದ ಈ ದೇವಸ್ಥಾನ ಗಳ ಭಕ್ತರ ಪರವಾಗಿ  ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: