ಕರ್ನಾಟಕಪ್ರಮುಖ ಸುದ್ದಿ

ಕೊವಿಡ್ ಲಸಿಕಾ ಮೇಳ ಭರ್ಜರಿ ಯಶಸ್ವಿ

ರಾಜ್ಯ(ಹಾಸನ)ಸೆ 18:- ಜಿಲ್ಲೆಯಲ್ಲಿ ಕೊವಿಡ್ ಲಸಿಕಾ ಮೇಳ ಭರ್ಜರಿಯಾಗಿ ಯಶಸ್ವಿಗೊಂಡಿದೆ.
ಒಂದೇ ದಿನ‌ ಸುಮಾರು 90 ಸಾವಿರ ಮಂದಿಗೆ ಲಸಿಕೆ ಹಾಕುವ ಮೂಲಕ‌ ಹೊಸ ದಾಖಲೆ‌ ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ  ಸರ್ಕಾರ ರಾಜ್ಯಾದ್ಯಂತ 30 ಲಕ್ಷ ಮಂದಿಗೆ ಲಸಿಕೆ ಹಾಕುವ ಉದ್ದೇಶದೊಂದಿಗೆ ಜಿಲ್ಲೆಗೆ 80 ಸಾವಿರ ಲಸಿಕೆ ಗುರಿ ನಿಗಧಿ ಪಡಿಸಿತ್ತು.ಆದರೆ ಜಿಲ್ಲೆಯಾದ್ಯಂತ ಸಂಜೆ 8 ಗಂಟೆ ವೆಳೆಗೆ 92ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ‌ ಹಾ ಕುವ ಮೂಲಕ ಶೇ 115 ರಷ್ಟು ಸಾಧನೆಯೊಂದಿಗೆ ಪ್ರಶಂಸೆಗೆ ಪಾತ್ರವಾಗಿದೆ.

ಹಾಸನ ಜಿಲ್ಲೆ ಇಂದಿನ ಲಸಿಕಾ ಕಾರ್ಯದಲ್ಲಿ 5ನೇ ಸ್ಥಾನ ಪಡೆದಿದೆ. ಬೆಂಗಳೂರು‌ ನಗರ ಶೇ 132 ರಷ್ಟು ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು,ಶಿವಮೊಗ್ಗ, ರಾಮನಗರ, ಧಾರವಾಡ ನಂತರದ ಸ್ಥಾನದಲ್ಲಿವೆ .

ಬೃಹತ್ ಲಸಿಕಾ ಮೇಳಕ್ಕೆ ಜಿಲ್ಲೆಯಲ್ಲಿ ವ್ಯವಸ್ಥಿತ ಸಿದ್ದತೆ ಮಾಡಲಾಗಿತ್ತು.ಜಿಲ್ಲಾಧಿಕಾರಿ ಅರ್. ಗಿರೀಶ್ ಹಲವು ಸುತ್ತಿನ ಸಭೆ ನಡೆಸಿ ,ಖಾಸಗಿ‌ ಆಸ್ಪತ್ರೆ, ಸಂಘ ಸಂಸ್ಥೆಗಳ ನರೆವನ್ನು ಪಡೆದು ಪೊಲಿಯೊ ಲಸಿಕಾ ಮಾದರಿಯಲ್ಲಿ ಕೊವಿದ್ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು .
ಹಳ್ಳಿ ಹಳ್ಳಿಗಳಲ್ಲಿ ನಡೆದ ಕೊವಿದ್ ಲಸಿಕಾ ಕಾರ್ಯ ದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪಾಲ್ಹೊಂಡು ಯಶಸ್ಸು ಗೊಳಿಸಿದರು.
ಜಿಲ್ಲಾಡಳಿತ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ,ಸಿ.ಇ.ಒ ಅಭಿನಂದನೆ

ಕೊವಿಡ್ ಲಸಿಕಾ ಮೇಳ‌ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ  ಎಲ್ಲಾ ಅಧಿಕಾರಿಗಳು ,ವೈದ್ಯರು,ಲಸಿಕಾ ಸಿಬ್ಬಂದಿ ಹಾಗೂ ಸಂಘ ಸಂಸ್ಥೆ ಗಳಿಗೆ ಜಿಲ್ಲಾಧಿಕಾರಿ ಅರ್ ಗಿರೀಶ್ ,ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ‌ ಅಧಿಕಾರಿ ಬಿ‌.ಎ ಪರಮೇಶ್ ಅಭಿನಂದಿಸಿದ್ದು,ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸತೀಶ್ ,ಜಿಲಾ ಶಸ್ತ್ರಚಿಕಿತ್ಸಕರಾದ ಕೃಷ್ಣಮೂರ್ತಿ ,ಹಿಮ್ಸ್ ನಿರ್ದಶಕರಾದ ಡಾ ರವಿ ಕುಮಾರ್ ಹಾಗೂ ಅರೊಗ್ತ ಇಲಾಖೆ ಅಧಿಕಾರಿ ಸಿಬ್ಬಂದಿ ಒಂದು ತಂಡವಾಗಿ ಶ್ರಮಿಸಿದ್ದಾರೆ. ತಾಲ್ಲೂಕು ವೈದ್ಯಾಧಿಕಾರಿಗಳು ನಗರಸಭೆ ಆಯುಕ್ತರು, ನಗರ ,ಗ್ರಾಮ‌ ಸ್ಥಳೀಯ ಸಂಸ್ಥೆ ಅಧಿಕಾರಿ ಸಿಬ್ಬಂದಿ ಲಸಿಕಾ ಮೇಳ ಯಶಸ್ಸಿಗೆ ಶ್ರಮಿಸಿದ್ದಾರೆ

ಇನ್ನೂ ಲಸಿಕಾ ಕಾರ್ಯ ಪ್ರಗತಿಯಲ್ಲಿದೆ. ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನ ಇನ್ನೂ ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದು ರಾತ್ರಿ ವೆಳೇಗೆ ಒಂದು ಲಕ್ಷದ ವರೆಗೂ ತಲುಪುವ ನೀರೀಕ್ಷೆ ಇದೆ ಎಂದು ಡಿ.ಹೆಚ್.ಒ ಡಾ ಸತೀಶ್ ತಿಳಿಸಿದ್ದಾರೆ.

Leave a Reply

comments

Related Articles

error: