ಮೈಸೂರು

ಇಂದಿನಿಂದ ಆರಂಭವಾಗಿದೆ ಗಜಪಡೆಗೆ ತಾಲೀಮು

ಮೈಸೂರು, ಸೆ.19:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯೂ ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿದೆ. ಇಂದಿನಿಂದ ಗಜಪಡೆಗೆ ತಾಲೀಮು ಆರಂಭವಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್ ಕಾರಣದಿಂದಾಗಿ ಅರಮನೆ ಆವರಣಕ್ಕೆ ಮಾತ್ರ ಸಿಮೀತವಾಗಿ ಜಂಬೂ ಸವಾರಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಗಜಪಡೆಗಳ ತಾಲೀಮು ಸಹ ಅರಮನೆ ಆವರಣಕ್ಕೆ ಸೀಮಿತವಾಗಿದೆ.

ಮೊದಲ ದಿನದ ತಾಲೀಮನ್ನು 8 ಆನೆಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಕೋವಿಡ್ ಕಾರಣದಿಂದಾಗಿ ಈ ಬಾರಿ ಮೈಸೂರಿನ ರಾಜ ಬೀದಿಯಲ್ಲಿ ಪೂರ್ವ ತಾಲೀಮಿಗೆ ತಡೆ ಬಿದ್ದಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಅರಮನೆ ಆವರಣದಲ್ಲೇ ಆನೆಗಳ ತಾಲೀಮು ನಡೆಯುತ್ತಿವೆ. ಈ ಬಾರಿಯೂ ಸಾರ್ವಜನಿಕರು ದಸರಾ ಆನೆಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲಾಗಿದೆ.

Leave a Reply

comments

Related Articles

error: