ಮೈಸೂರು

ದೂರದ ಊರಿಗೆ ತಂಗಿಯನ್ನು ವಿವಾಹ ಮಾಡಿಕೊಟ್ಟ ಕಾರಣಕ್ಕೆ ಮನನೊಂದ ಅಕ್ಕ ನೇಣಿಗೆ ಶರಣು

ಮೈಸೂರು,ಸೆ.20:-   ದೂರದ ಊರಿಗೆ ತಂಗಿಯನ್ನು ಕೊಟ್ಟು ವಿವಾಹ ಮಾಡಲು ವಿರೋಧಿಸುತ್ತಿದ್ದ ಅಕ್ಕ ತಂಗಿಯ ಮದುವೆ ಆದ ಎರಡೇ ದಿನಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ .

ಮೃತರನ್ನು ಲಕ್ಷ್ಮಿ (34) ಎಂದು ಹೇಳಲಾಗಿದೆ.  ಈಕೆಯ ಸಹೋದರಿ  ಬಿಂದು ಎಂಬವಳನ್ನು ಚಿಕ್ಕಮಂಗಳೂರಿನ ಕೊಪ್ಪಗೆ ಎರಡು ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದೂರದ ಊರಿಗೆ ತಂಗಿಯನ್ನು ಕೊಟ್ಟು ವಿವಾಹ ಮಾಡಲು ಅಕ್ಕ ಲಕ್ಷ್ಮಿಯ ವಿರೋಧವಿತ್ತು .  ಹನ್ನೆರಡು ವರ್ಷಗಳ ಹಿಂದೆ ಶ್ರೀನಿವಾಸ್ ಎಂಬಾತನನ್ನು ಮದುವೆ ಆಗಿದ್ದ ಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ತವರು ಮನೆಯಲ್ಲೇ ವಾಸವಿದ್ದಳು. ಈ ಮಧ್ಯೆ ತಂಗಿ ಬಿಂದುಗೆ ದೂರದ ಊರಿನ ಸಂಬಂಧವನ್ನು  ನಿಶ್ಚಯಿಸಿದ್ದು, ಅದನ್ನು ಲಕ್ಷ್ಮಿ ವಿರೋಧಿಸಿದ್ದರು. ಆಕೆಯ  ವಿರೋಧವನ್ನೂ ಲೆಕ್ಕಿಸದ ಪೋಷಕರು ಸೆಪ್ಟೆಂಬರ್ 16 ರಂದು ವಿವಾಹ ನೆರವೇರಿಸಿದ್ದರು. ಇದರಿಂದ ಬೇಸತ್ತ ಲಕ್ಷ್ಮಿ ತವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: