ಮೈಸೂರು

ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ  ರಾಜ್ಯ ಒಬಿಸಿ ಮೋರ್ಚಾ ಜವಾಬ್ದಾರಿ  

ಮೈಸೂರು,ಸೆ.20:-  ದಾವಣಗೆರೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ರಾಜ್ಯ  ಘಟಕದ  ಕಾರ್ಯಕಾರಿಣಿ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಖಾತೆಯ ಸಚಿವರಾದ  ಕೆ ಎಸ್ ಈಶ್ವರಪ್ಪ ಅವರಿಗೆ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿ ನೀಡಿದ್ದು, ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು ಅವರು ಪಕ್ಷದ ಪ್ರಮುಖರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪಕ್ಷದ ಪ್ರಮುಖರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.  ಪಕ್ಷದ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ  ಹಾಗೂ ಪಕ್ಷದ ಸಂಘಟನೆಯ ಬಲ ವರ್ಧನೆಯೇ ನನ್ನ ಪ್ರಮುಖ ಆದ್ಯತೆ   ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: