
ಮೈಸೂರು
ತಹಶೀಲ್ದಾರ್ ಹುದ್ದೆಯಿಂದ ಮೋಹನ್ ಕುಮಾರ್ ಕೆಳಗಿಳಿಸುವಂತೆ ಕೆಎಟಿ ಆದೇಶ
ಮೈಸೂರು,ಸೆ.20:- ತಹಶೀಲ್ದಾರ್ ಹುದ್ದೆಯಿಂದ ಮೋಹನ್ ಕುಮಾರ್ ಅವರನ್ನು ಕೆಳಗಿಳಿಸುವಂತೆ ಕೆಎಟಿ ಆದೇಶಿಸಿದೆ.
ಜುಲೈ 23 ರಂದು ಹುಣಸೂರು ತಹಶೀಲ್ದಾರ್ ಆಗಿ ಮೋಹನ್ಕುಮಾರ್ ಬಡ್ತಿ ಹೊಂದಿದ್ದರು. ಕೆಆರ್.ನಗರ ಚುಂಚನಕಟ್ಟೆ ನಾಡ ಕಚೇರಿಯಲ್ಲಿ ಆರ್ಐ ಆಗಿದ್ದರು. ರಾಜ್ಯ ಸರ್ಕಾರ ಬಡ್ತಿ ನೀಡಿ ಗ್ರೇಡ್ 2 ತಹಶೀಲ್ದಾರ್ ಮಾಡಿತ್ತು. ಇದರ ನಡುವೆ ಗ್ರೇಡ್ 1 ತಹಶೀಲ್ದಾರ್ ಹುದ್ದೆಯಲ್ಲಿ ಕೂರಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಹಿಂದಿನ ತಹಶೀಲ್ದಾರ್ ಬಸವರಾಜು ಅವರು ಕೆಎಟಿ ಮೆಟ್ಟಿಲೇರಿದ್ದರು. ಸದ್ಯ ಗ್ರೇಡ್ 1 ತಹಶೀಲ್ದಾರ್ ಹುದ್ದೆ ನಿರ್ವಹಿಸಲು ಮೋಹನ್ ಕುಮಾರ್ ಅನರ್ಹ ಎಂದು ಆದೇಶ ಹೊರಡಿಸಿದ್ದು, ಉಪ ವಿಭಾಗಾಧಿಕಾರಿಗೆ ಅಧಿಕಾರ ಕೊಟ್ಟು ಕಂದಾಯ ಇಲಾಖೆಗೆ ವಾಪಸ್ ಹೋಗುವಂತೆ ಆದೇಶಿಸಿದೆ. (ಕೆ.ಎಸ್,ಎಸ್.ಎಚ್)