ಮೈಸೂರು

ವೇತನ ಪಾವತಿಸದಿರುವುದನ್ನು ವಿರೋಧಿಸಿ ವೈದ್ಯರ ಪ್ರತಿಭಟನೆ

ಮೈಸೂರು,ಸೆ.20:- ರಾಜ್ಯ ಸರ್ಕಾರದಿಂದ ಕಡ್ಡಾಯ ಗ್ರಾಮೀಣ ಸೇವೆ-2021ರ ಭಾಗವಾಗಿ ಎಂಎಂ ಸಿಆರ್ ಐ ನಲ್ಲಿ ನೇಮಕಗೊಂಡ ಕಿರಿಯ ವೈದ್ಯರುಗಳಿಗೆ ವೇತನ ನೀಡದಿರುವುದನ್ನು ವಿರೋಧಿಸಿ ಇಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಮೆಡಿಕಲ್ ಕಾಲೇಜಿನ  ಎದುರು ಪ್ರತಿಭಟನಾನಿರತರು ಮಾತನಾಡಿ 30ನೇ ಜೂನ್ 2021ರಿಂದ ಆರಂಭವಾಗಿ ಎರಡೂವರೆ ತಿಂಗಳುಗಳಿಗಿಂತ ಹೆಚ್ಚು ಕಾಲ ಕೋವಿಡ್ ವಾರ್ಡ್ ಗಳಲ್ಲಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡಿದರೂ ನಮ್ಮ ಅಸ್ತಿತ್ವವನ್ನು ಎಂಎಂ ಸಿಆರ್ ಐನ ಡೀನ್ ಮತ್ತು ನಿರ್ದೇಶಕರಾದ ಡಾ.ಸಿ.ಪಿ.ನಂಜರಾಜ ಅವರು ನಿರ್ಲಕ್ಷ್ಯಿಸಿದ್ದಾರೆ. ನಮಗೆ ನೀಡಬೇಕಾದ ಸಂಬಳ ಮತ್ತು ಕೋವಿಡ್ ಭತ್ಯೆಯ ಕುರಿತು ವಿಚಾರಿಸಿದಾಗ ಎಂಎಂ ಸಿ &ಆರ್ ಐ ನಲ್ಲಿ ಯಾವುದೇ ಜ್ಯೂನಿಯರ್ ರೆಸಿಡೆಂಟ್ ಹುದ್ದೆಗಳಿಲ್ಲ ಎಂದು ಉಲ್ಲೇಖಿಸಿ ನಮ್ಮ ಹಕ್ಕುಗಳನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಜೆ ಆರ್ ಗಳ ವೇತನಕ್ಕೆ ಸಂಬಂಧಿಸಿದಂತೆ ಕಾಲೇಜುಗಳಿಗೆ ಯಾವುದೇ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಕರ್ನಾಟಕ ನಿವಾಸಿಗಳ ವೈದ್ಯರ ಸಂಘದ ಮೂಲಕ ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಸಂಪರ್ಕಿಸಿದಾಗ ನಿರ್ದೇಶಕರ ಸಂಸ್ಥೆಯು ಅಸ್ತಿತ್ವದಲ್ಲಿರುವ ಸಂಸ್ಥೆಯ ನಿಧಿಯ ಮೂಲಕ ಜೆಆರ್ ಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು. ಈ ವಿಷಯ ಎಂ ಎಂ ಸಿ &ಆರ್ ಐ ನ ಹಣಕಾಸು ಸಲಹೆಗಾರರಿಂದ ದೃಢೀಕರಿಸಲ್ಪಟ್ಟಿದೆ. ಇತರ ವೈದ್ಯಖಿಯ ಕಾಲೇಜುಗಳಲ್ಲಿ ಸಂಬಳ ಪಾವತಿ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದಾಗ ಡೀನ್ ಮತ್ತು ನಿರ್ದೇಶಕರು ನಿಷ್ಠೂರವಾಗಿ ನಮಗೆ ಬೇರೆ ಸಂಸ್ಥೆಗೆ ವರ್ಗವಾಗುವಂತೆ ಸಲಹೆ ನೀಡಿದರು. ಎಂಎಂಸಿ ಮತ್ತು ಆರ್ ಐ ಯಾವುದೇ ಕಾರಣಕ್ಕೂ ವೇತನ ನೀಡುವುದಿಲ್ಲವೆಂದರು. ಪ್ರತಿಷ್ಠಿತ ಎಂಬಿಬಿಎಸ್ ಪದವಿ ಮುಗಿಸಿದ ನಂತರವೂ ಕೂಡ ಆಹಾರ, ವಸತಿ, ಇತ್ಯಾದಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನಾವು ಇನ್ನೂ ಆರ್ಥಿಕವಾಗಿ ಪೋಷಕರನ್ನು ಅವಲಂಬಿಸಿದ್ದೇವೆ. ಅಲ್ಲದೆ ಸಾಂಕ್ರಾಮಿಕ ರೋಗದ ನಿವಾರಣೆಗಾಗಿ ಕೆಲಸ ಮಾಡುತ್ತಿರುವ ಎಂಬಿಬಿಎಸ್ ವೈದ್ಯರಿಗೆ 40ಸಾವಿರ ವೇತನ ತುಂಬಾ ಕಡಿಮೆ. ಆದಾಗ್ಯೂ ಅದನ್ನು ಸರಿಯಾದ ಸಮಯದಲ್ಲಿ ಪಾವತಿಸಿಲ್ಲ. ಸಂಬಳದ ಹೊರತಾಗಿ ತಿಂಗಳೀಗೆ 10,000ತೂ.ನಷ್ಟು ನೀಡಬೇಕಾದ ಕೋವಿಡ್ ಪ್ರೋತ್ಸಾಹ ಧನವನ್ನು  ನಮಗೆ ನೀಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಾ.ಶಿವಾನಂದ್ ಬಿ, ಡಾ.ರವಿಕಿರಣ್ ಎಂ, ಡಾ.ಹರ್ಷಿಣಿ, ಡಾ.ಸ್ನೇಹಲತಾ, ಡಾ.ಚಂದನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: