ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಸೈಮಾ ಆವಾರ್ಡ್ಸ್: ಅತ್ಯುತ್ತಮ ಸಿನಿಮಾ ಲವ್ ಮಾಕ್ಟೇಲ್, ಅತ್ಯುತ್ತಮ ನಟ ಡಾಲಿ ಧನಂಜಯ್

ಬೆಂಗಳೂರು,ಸೆ.20-ದಕ್ಷಿಣ ಭಾರತದ ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುವ ಸೈಮಾ 2020ನೇ ಸಾಲಿನ ಪ್ರಶಸ್ತಿಗಳನ್ನು ವಿತರಿಸಲಾಗಿದ್ದು, ಕನ್ನಡದ `ಲವ್ ಮಾಕ್ಟೇಲ್’ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ಅತ್ಯುತ್ತಮ ನಟ ಪ್ರಶಸ್ತಿ ಡಾಲಿ ಧನಂಜಯ್ (ಪಾಪ್‌ಕಾರ್ನ್ ಮಂಕಿ ಟೈಗರ್) ಪಾಲಾಗಿದೆ.

ಮೊನ್ನೆ 2019ನೇ ಸಾಲಿನ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗಿದ್ದು, ನಿನ್ನೆ 2020ನೇ ಸಾಲಿನಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. ವಿಶೇಷವೆಂದರೆ ನೇರವಾಗಿ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ಸೈಮಾ 2020 ಪ್ರಶಸ್ತಿ ವಿಜೇತರಾದ ಕನ್ನಡಿಗರ ಪಟ್ಟಿ ಇಂತಿದೆ:

ಅತ್ಯುತ್ತಮ ಸಿನಿಮಾ: ‘ಲವ್ ಮಾಕ್ಟೇಲ್’, ಅತ್ಯುತ್ತಮ ನಟ: ಡಾಲಿ ಧನಂಜಯ್ (ಪಾಪ್‌ಕಾರ್ನ್ ಮಂಕಿ ಟೈಗರ್), ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್), ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಖುಷಿ ರವಿ (ದಿಯಾ), ಅತ್ಯುತ್ತಮ ಪೋಷಕ ನಟ: ಬಿ ಸುರೇಶ್ (ಆಕ್ಟ್ 1978), ಅತ್ಯುತ್ತಮ ಪೋಷಕ ನಟಿ: ಅಮೃತಾ ಅಯ್ಯಂಗಾರ್ (ಲವ್ ಮಾಕ್ಟೆಲ್), ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು (ಫ್ರೆಂಚ್ ಬಿರಿಯಾನಿ), ಅತ್ಯುತ್ತಮ ನಟ (ಮೊದಲ ಸಿನಿಮಾ): ಪೃಥ್ವಿ ಅಂಬರ್ (ದಿಯಾ), ಅತ್ಯುತ್ತಮ ನಟಿ (ಮೊದಲ ಸಿನಿಮಾ): ಸಪ್ತಮಿ ಗೌಡ (ಪಾಪ್‌ಕಾರ್ನ್ ಮಂಕಿ ಟೈಗರ್), ಅತ್ಯುತ್ತಮ ಹಿನ್ನೆಲೆ ಗಾಯನ: ಸಂಚಿತ್ ಹೆಗಡೆ (ಜಂಟಲ್‌ಮ್ಯಾನ್; ಮರಳಿ ಮನಸಾಗಿದೆ), ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಧಿತಿ ಸಾಗರ್ (ಫ್ರೆಂಚ್ ಬಿರಿಯಾನಿ; ಬೆಂದಕಾಳೂರು), ಅತ್ಯುತ್ತಮ ಛಾಯಾಗ್ರಹಣ: ವಿಶಾಲ್ ವಿಠ್ಠಲ್, ಸೌರಬ್ ವಾಗ್ಮೋರೆ (ದಿಯಾ), ಅತ್ಯುತ್ತಮ ಗೀತ ಸಾಹಿತ್ಯ: ಧನಂಯ್ ರಂಜನ್ (ಸೋಲ್ ಆಫ್ ದಿಯಾ), ಅತ್ಯುತ್ತಮ ನಿರ್ದೇಶಕ (ಮೊದಲ ಸಿನಿಮಾ): ರಾಧಾ ಕೃಷ್ಣ (ಮಾಯಾಬಜಾರ್ 2016), ಅತ್ಯುತ್ತಮ ನಿರ್ಮಾಪಕ (ಮೊದಲ ಸಿನಿಮಾ): ಅಂಜನಾದ್ರಿ ಸಿನಿ ಕ್ರಿಯೇಶನ್ಸ್ (ಶಿವಾಜಿ ಸೂರತ್ಕಲ್).

2019ನೇ ಸಾಲಿನ ಪ್ರಶಸ್ತಿ ವಿಜೇತರು:

ಅತ್ಯುತ್ತಮ ಸಿನಿಮಾ ಯಜಮಾನ, ಅತ್ಯುತ್ತಮ ನಟ-ದರ್ಶನ್ (ಯಜಮಾನ), ಅತ್ಯುತ್ತಮ ನಟಿ-ರಚಿತಾ ರಾಮ್ (ಆಯುಷ್ಮಾನ್ ಭವ), ವಿಮರ್ಶಕರ ಉತ್ತಮ ನಟ-ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ), ವಿಮರ್ಶಕರ ಅತ್ಯುತ್ತಮ ನಟಿ-ರಶ್ಮಿಕಾ ಮಂದಣ್ಣ (ಯಜಮಾನ), ಅತ್ಯುತ್ತಮ ಹೊಸ ನಟ-ಅಭಿಷೇಕ್ ಅಂಬರೀಶ್ (ಅಮರ್), ಅತ್ಯುತ್ತಮ ಪೋಷಕ ನಟಿ-ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ), ಅತ್ಯುತ್ತಮ ಖಳನಟ-ಸಾಯಿಕುಮಾರ್ (ಭರಾಟೆ), ಅತ್ಯುತ್ತಮ ನೃತ್ಯ ನಿರ್ದೇಶನ-ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ), ಅತ್ಯುತ್ತಮ ಹಿನ್ನೆಲೆ ಗಾಯಕಿ-ಅನನ್ಯಾ ಭಟ್ (ಗೀತಾ: ಕೇಳದೇ ಕೇಳದೇ), ಅತ್ಯುತ್ತಮ ಸಾಹಿತ್ಯ-ಪವನ್ ಒಡೆಯರ್ (ನಟಸಾರ್ವಭೌಮ), ಅತ್ಯುತ್ತಮ ಹಾಸ್ಯ ಕಲಾವಿದ-ಸಾಧು ಕೋಕಿಲ (ಯಜಮಾನ), ಅತ್ಯುತ್ತಮ ನಿರ್ದೇಶನ-ಹರಿಕೃಷ್ಣ, ಫೋನ್ ಕುಮಾರ್ (ಯಜಮಾನ), ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ (ಯಜಮಾನ), ಅತ್ಯುತ್ತಮ ಚೊಚ್ಚಲ ನಿರ್ದೇಶನ-ಮಯೂರ ರಾಘವೇಂದ್ರ (ಕನ್ನಡ್ ಗೊತ್ತಿಲ್ಲ).

 

Leave a Reply

comments

Related Articles

error: