
ಪ್ರಮುಖ ಸುದ್ದಿವಿದೇಶ
ಟ್ರಂಪ್ ವೀಸಾ ನೀತಿ ಪರಿಣಾಮ : ಹತ್ತು ಸಾವಿರ ಅಮೆರಿಕನ್ನರನ್ನು ನೇಮಿಸಿಕೊಳ್ಳಲಿರುವ ಇನ್ಫೋಸಿಸ್
ಬೆಂಗಳೂರು : ಯುಎಸ್ನಲ್ಲಿ ಟ್ರಂಪ್ ಸರ್ಕಾರ ಎಚ್-1ಬಿ ವೀಸಾ ನೀತಿಯಲ್ಲಿ ಮಾರ್ಪಾಟು ಮಾಡಿರುವ ಪರಿಣಾಮ ಹತ್ತು ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಲು ಇನ್ಫೋಸಿಸ್ ನೀಡಲಿದೆ.
ಹೊಸ ಎಚ್-1ಬಿ ವೀಸಾ ನೀತಿಯಿಂದಾಗಿ ಭಾರತೀಯ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿವೆ. ಸಾಫ್ಟ್’ವೇರ್ ದೈತ್ಯ ಇನ್ಫೋಸಿಸ್ ಈಗ 10,000 ಅಮೆರಿಕನ್ನರಿಗೆ ಉದ್ಯೋಗ ನೀಡಲೇಬೇಕಾಗಿದೆ. ಅಮೆರಿಕದಲ್ಲಿ ಇನ್ಫೋಸಿಸ್ ತನ್ನ ನಾಲ್ಕು ಕಚೇರಿಗಳನ್ನು ತೆರೆಯುತ್ತಿದ್ದು, ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕಿದೆ. ಈಗಾಗಲೇ ಎರಡು ಸಾವಿರ ಸ್ಥಳೀಯರನ್ನು ನೇಮಕ ಮಾಡಿಕೊಂಡಿರುವ ಕಂಪನಿಗೆ ಇನ್ನೂ 10 ಸಾವಿರ ಮಂದಿ ಉದ್ಯೋಗಿಗಳ ಅಗತ್ಯವಿದೆ.
ಪ್ರತಿ ವರ್ಷ ಅಮೆರಿಕ 65 ಸಾವಿರ ಮಂದಿಗೆ ಎಚ್-1ಬಿ ವೀಸಾ ನೀಡುತ್ತಿತ್ತು. ಉನ್ನತ ಶಿಕ್ಷಣಕ್ಕಾಗಿ 20 ಸಾವಿರ ಮಂದಿಗೆ ವೀಸಾ ನೀಡಲಾಗುತ್ತಿತ್ತು. ಆದರೆ ಡೊನಾಲ್ಡ್ ಟ್ರಂಪ್ ವೀಸಾ ನೀತಿಯಲ್ಲಿ ಬದಲಾವಣೆ ಮಾಡಿದ್ದರಿಂದ ಭಾರತದ ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ. ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪನಿಗಳು ಎಚ್-1ಬಿ ವೀಸಾ ಮೂಲಕ ಹೆಚ್ಚುವರಿ ಟಿಕೆಟ್ ಗಳನ್ನು ಲಾಟರಿ ಮೂಲಕ ವಿತರಿಸುತ್ತಿವೆ ಎಂದು ಅಮೆರಿಕ ಆರೋಪ ಮಾಡಿತ್ತು.
ಟ್ರಂಪ್ ಸರ್ಕಾರ ಬಂದಮೇಲೆ ಹೆಚ್ಚು ಅಮೆರಿಕ ಹಿತಾಸಕ್ತಿ ಕೇಂದ್ರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಇತರ ರಾಷ್ಟ್ರಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಉದ್ಯೋಗ ಅರಸಿ ಅಮೆರಿಕಕ್ಕೆ ಹಾರುವ ಭಾರತೀಯರ ಕನಸಿಗೆ ಗರ ಬಡಿದಂತಾಗಿದೆ.
(ಎನ್.ಬಿ.ಎನ್)