ಮೈಸೂರು

ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರ ಉದ್ಘಾಟಿಸಿದ ಶಾಸಕ ರಾಮದಾಸ್

ಮೈಸೂರು, ಸೆ.20:- ಪಶುಸಂಗೋಪನೆ ಇಲಾಖೆ , ಪ್ರಾಣಿ ದಯಾ ಸಂಘ ಹಾಗೂ ಮೈಸೂರು ಡಾಗ್ ಬ್ರೀಡರ್ಸ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರವನ್ನು  ಶಾಸಕರಾದ ಎಸ್.ಎ ರಾಮದಾಸ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಕೊರೊನಾ ಸಂದರ್ಭದಲ್ಲಿ ನಿರಂತರ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ.  ಈಗೀಗ ಸ್ವಲ್ಪ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲಿ 2 ತಿಂಗಳ ಕಾಲ ಊಟವನ್ನು ನೀಡಿದ್ದೆವು. ಅದೇ ಸಂದರ್ಭದಲ್ಲಿ ಮೈಸೂರಿನ 25 ಕಡೆ ಬೀದಿ ನಾಯಿಗಳಿಗೂ ಊಟವನ್ನು ಹಾಕಿದ್ದೆವು. ಮೈಸೂರಿನಲ್ಲಿ ಯಾರ್ಯಾರು ಶ್ವಾನ ಪ್ರಿಯರಿದ್ದಾರೋ ಅವರೆಲ್ಲರೂ ಸೇರಿ ಒಂದು ಅಸೋಸಿಯೇಷನ್ ಮಾಡಿಕೊಳ್ಳಬೇಕು ನಾವು ಈ ಮೂಲಕ ಮಾದರಿಯ ರೀತಿಯಲ್ಲಿ ಶ್ವಾನಗಳಿಗೆ ರೀ ಹ್ಯಾಬಿಲಿಟೇಶನ್ ಸೆಂಟರ್ ಅನ್ನೂ ಮಾಡಲು ಹೊರಟಿದ್ದೇವೆ. ಇದಕ್ಕಾಗಿಯೇ 4 ಎಕರೆ ಭೂಮಿ ಹಾಗೂ 2 ಕೋಟಿ ರೂ ಗಳನ್ನು ಕೊಡುವ ಕೆಲಸ ನಾವು ಮಾಡುವವರಿದ್ದೇವೆ. ಮಹಾಭಾರತದಲ್ಲೂ ಸಹ ನಾವು ಕೇಳಿದ್ದೇವೆ, ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ಅವರೊಟ್ಟಿಗೆ ಶ್ವಾನವೂ ಇತ್ತು. ಧರ್ಮರಾಯನ ಜೊತೆಗೆ ಆ ಶ್ವಾನವೂ ಸಹ ಸ್ವರ್ಗಕ್ಕೆ ತೆರಳಿತ್ತು.
ಶ್ವಾನಗಳಿಗೆ ರೀ ಹ್ಯಾಬಿಲಿಟೇಶನ್ ಸೆಂಟರ್ ಮೂಲಕ ಮಾದರಿ ಕಾರ್ಯವನ್ನು ಮಾಡಿ ಈ ಪ್ರಾಜೆಕ್ಟ್ ಅನ್ನು ಕೇಂದ್ರಕ್ಕೆ ತಿಳಿಸುವ ಕೆಲಸ ಮಾಡೋಣ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: