ಮೈಸೂರು

ಕೆಎಸ್ ಒಯು ಆವರಣದಲ್ಲಿ ಕಾರು ಅಪಘಾತ

ಮೈಸೂರು,ಸೆ.20:-  ಕೆಎಸ್ಓಯು ಆವರಣದಲ್ಲಿ ಕಾರು ಅಪಘಾತ ವಾಗಿದ್ದು, ವಿದ್ಯಾರ್ಥಿನಿಯರಿಬ್ಬರಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರಿದ್ದ ಕಾರ್  ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಕೆಎಸ್ಓಯು ಆಡಳಿತ ಮುಂಭಾಗದ ಗೋಡೆಗೆ  ಕಾರು ಗುದ್ದಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಸ್ಥಳಕ್ಕೆ ಜಯಲಕ್ಷ್ಮಿಪುರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: