ಪ್ರಮುಖ ಸುದ್ದಿಮನರಂಜನೆ

  ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ  : ಜಾಮೀನು

ದೇಶ(ಮುಂಬೈ)ಸೆ.21:-  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಎರಡು ತಿಂಗಳ ಹಿಂದೆ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅದರ ನಂತರ ಶಿಲ್ಪಾ ಶೆಟ್ಟಿ  ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತಲ್ಲದೇ,  ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡ ಆದರು.

ಸೋಮವಾರ  ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜ್ ಕುಂದ್ರಾಗೆ  ಜಾಮೀನು ನೀಡಿದೆ. ನ್ಯಾಯಾಲಯವು ಕುಂದ್ರಾ ಅವರ ಸಹಾಯಕ ರಯಾನ್ ಥೋರ್ಪ್ ಗೆ ಜಾಮೀನು ನೀಡಿದೆ. ಜುಲೈನಲ್ಲಿ ಕುಂದ್ರಾ ಜೊತೆಗೆ ಥೋರ್ಪ್  ನ್ನೂ ಬಂಧಿಸಲಾಗಿತ್ತು.

ಸೋಮವಾರ ರಾಜ್ ಕುಂದ್ರಾ ಜಾಮೀನು ಪಡೆದ ನಂತರವೂ, ಶಿಲ್ಪಾ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.  ಕೆಟ್ಟ ಚಂಡಮಾರುತದ ನಂತರವೂ ಸುಂದರವಾದ ಸಂಗತಿಗಳು ನಡೆಯಬಹುದು ಎಂಬುದನ್ನು ನಿರೂಪಿಸಲು ಕಾಮನಬಿಲ್ಲು ಅಸ್ತಿತ್ವದಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವಾಗ ರಾಜ್ ಕುಂದ್ರಾ, ಈ ಪ್ರಕರಣದಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಸಲ್ಲಿಸಿರುವ ಪೂರಕ ಚಾರ್ಜ್ ಶೀಟ್ ನಲ್ಲಿ ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿಕೊಂಡಿದ್ದರು.  ಅನುಮಾನಾಸ್ಪದ ಅಶ್ಲೀಲ ವಸ್ತುಗಳನ್ನು ಸೃಷ್ಟಿಸುವುದರಲ್ಲಿ “ಸಕ್ರಿಯವಾಗಿ” ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಈ ಪ್ರಕರಣದಲ್ಲಿ ತನ್ನನ್ನು “ಬಲಿಪಶು” ಮಾಡಲಾಗುತ್ತಿದೆ ಎಂದು ಅವರು ಅರ್ಜಿಯಲ್ಲಿ ಹೇಳಿಕೊಂಡಿದ್ದರು.

ಅವರಿಗೆ ಈಗ ಜಾಮೀನು ಲಭಿಸಿದ್ದು, ಇಂದು ಜೈಲಿನಿಂದ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: