Uncategorized

ಯುವಜನತೆ ನಾಟಕಗಳಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆ: ಉಮಾಶಂಕರ್

ಯುವಜನತೆ ನಾಟಕಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಕಾರ್ಯದರ್ಶಿ ಉಮಾಶಂಕರ್ ಹೇಳಿದರು.

ರಂಗಾಯಣದ ಭೂಮಿಗೀತದಲ್ಲಿ ಹಸಿರು ದಸರಾ ಮತ್ತು ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಲೇಜು ರಂಗೋತ್ಸವದಲ್ಲಿ 11ಕಾಲೇಜುಗಳು ನಾಟಕ ಪ್ರದರ್ಶಿಸಲಿದ್ದು ಅದರಲ್ಲಿ 9ತಂಡಗಳು ಯುವಕರಿಂದಲೇ ಕೂಡಿದೆ. ಇದು ನಿಜಕ್ಕೂ ಶ್ಲಾಘನೀಯ. ಇದು ಒಳ್ಳೆಯ  ಬೆಳವಣಿಗೆಯೂ ಆಗಿದೆ. ಹೆಚ್ಚಿನ ನಿರ್ದೇಶಕರೂ ಯುವಕರೇ ಆಗಿರುವುದು ನಿಜಕ್ಕೂ ಸಂತೋಷದ ವಿಷಯ ಈ ಬಾರಿ ದಸರಾ ಉತ್ಸವದಲ್ಲಿ ರಂಗಾಯಣ ಹಮ್ಮಿಕೊಂಡಿರುವ ಹಸಿರು ದಸರಾ ತುಂಬಾ ಅರ್ಥಪೂರ್ಣವಾಗಿದೆ. ನಾವು ಹಸಿರನ್ನೇ ನಂಬಿದ್ದೇವೆ. ಅದರ ಮೇಲೆ ಅವಲಂಬಿತರಾಗಿದ್ದೇವೆ. ಹಸಿರನ್ನು ಉಳಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ರಂಗ ಸಂಘಟಕ ಮಂಡ್ಯದ ಜಯಪ್ರಕಾಶ ಗೌಡ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮೊದಲೆಲ್ಲಾ ನಾಟಕಗಳು ಸಾವಿರ ರೂಪಾಯಿಯೊಳಗೆ ಮುಗಿಯುತ್ತಿತ್ತು. ಆದರೀಗ ಲಕ್ಷಗಟ್ಟಲೇ ಖರ್ಚು ತಗುಲಲಿದೆ. ಸರ್ಕಾರದಿಂದ ಯಾವುದೇ ರೀತಿಯಿಂದಲೂ ಸಹಾಯ ಸಿಗುತ್ತಿಲ್ಲ. ಸರ್ಕಾರ ಧನ ಸಹಾಯ ಮಾಡಬೇಕು. ಕೇವಲ ದೊಡ್ಡ ರಂಗಭೂಮಿಗಷ್ಟೇ ಅಲ್ಲ, ಚಿಕ್ಕ ರಂಗಭೂಮಿಗಳಿಗೂ ಸಹಾಯ ಮಾಡಬೇಕು ಎಂದು ತಿಳಿಸಿದರು.

ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ರಂಗಾಯಣ ನಿರ್ದೇಶಕ ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕಾರ್ಯಕ್ರಮ ಸಂಯೋಜಕ ವಿನಾಯಕ ಭಟ್ ಹಾಸಣಗಿ ಉಪಸ್ಥಿತರಿದ್ದರು.

 

Leave a Reply

comments

Related Articles

error: