ಮೈಸೂರು

ಎರಡನೇ ದಿನವೂ ಮುಂದುವರಿದ ಭಾರ ಹೊರುವ ತಾಲೀಮು : ಫಿರಂಗಿ ಡ್ರೈ ತಾಲೀಮು

ಮೈಸೂರು,ಸೆ.21:- ವಿಶ್ವ ವಿಖ್ಯಾತ ದಸರಾ ಸಂಭ್ರಮವು ಮೈಸೂರಿನಲ್ಲಿ ನಿಧಾನವಾಗಿ ಕಳೆಗಟ್ಟುತ್ತಿದೆ. ಎರಡನೇ ದಿನವೂ   ಭಾರ ಹೊರುವ ತಾಲೀಮು ಮುಂದುವರಿದಿದೆ.

ಇಂದು ಧನಂಜಯ ಹೆಸರಿನ ಆನೆಯ ನೇತೃತ್ವದಲ್ಲಿ  ಭಾರ ಹೊರುವ ಅಭ್ಯಾಸ ನಡೆದಿದೆ. ಇಂದು ಧನಂಜಯ ಭಾರ ಹೊತ್ತು ಸಾಗಿದ್ದಾನೆ. ಸುಮಾರು 400 ಕೆ.ಜಿ ಮರಳಿನ ಮೂಟೆಯ‌ ಭಾರ ಹೊತ್ತು ಅರಮನೆಯಂಗಳದಲ್ಲಿ ನಡೆದಿದ್ದು, ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಎರಡು ಸುತ್ತು ಭಾರ ಹೊತ್ತು ಸಾಗಿದ್ದಾನೆ. ಧನಂಜಯನ ಜೊತೆ   ಉಳಿದ 7 ಆನೆಗಳು ಹೆಜ್ಜೆ ಹಾಕಿವೆ. ಈ ಬಾರಿ ಕೇವಲ ಮೂರು ಆನೆಗಳಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ನಿನ್ನೆ ಮೊದಲ ದಿನ ಅಭಿಮನ್ಯು ಭಾರ ಹೊತ್ತು ಸಾಗಿದ್ದ. ನಾಳೆ ಗೋಪಾಲಸ್ವಾಮಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಬದಲಿ ದಿನಗಳಲ್ಲಿ ಆನೆಗಳಿಗೆ ಭಾರ   ಅಧಿಕಾರಿಗಳು ಹೊರಿಸಲಿದ್ದಾರೆ.

ಇಂದು ಅರಮನೆ ಆವರಣದಲ್ಲಿ ಫಿರಂಗಿಯ ಮೂಲಕ ಮದ್ದುಗುಂಡು ಸಿಡಿಸುವ ಡ್ರೈ ತಾಲೀಮು ಕೂಡ ನಡೆಯಿತು. ಅರಮನೆ ಆವರಣದಲ್ಲಿ ಫಿರಂಗಿಯ ಮೂಲಕ ಮದ್ದುಗುಡ್ಡು ಸಿಡಿಸುವ ಡ್ರೈ ತಾಲೀಮು ನಡೆದಿದ್ದು, ಜಂಬೂಸವಾರಿ ವೇಳೆ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ 21 ಕುಶಾಲತೋಪು ಸಿಡಿಸಲಾಗುತ್ತದೆ. ನಿಗದಿತ ಸಮಯದಲ್ಲಿ 21 ಕುಶಾಲತೋಪು ಸಿಡಿಸಲು ರಿಹರ್ಸಲ್ ನಡೆಸಲಾಗುತ್ತದೆ. ಸಿಎಆರ್ ನ 15 ಕ್ಕೂ ಹೆಚ್ಚು ಸಿಬ್ಬಂದಿ ಡ್ರೈ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದರು. ಐದಾರು ದಿನಗಳಲ್ಲಿ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಹಾಗೂ ಕುದುರೆಗಳು ಬೆದರದಂತೆ ತಾಲೀಮು ಸಹ ನಡೆಯಲಿದೆ.    7 ಫಿರಂಗಿ ಗಾಡಿಗಳ ಮೂಲಕ 2 ಸುತ್ತಿನ ಒಟ್ಟು 14 ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: