ಮೈಸೂರು

ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ಪುತ್ಥಳಿಯನ್ನು ಸರ್ಕಾರವೇ ನಿರ್ಮಿಸುವಂತೆ ಒತ್ತಾಯ

ಮೈಸೂರು,ಸೆ.21:- ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ಅಭಿಮಾನಿಗಳು ನಿರ್ಮಿಸಿದ್ದ ಪುತ್ಥಳಿಯನ್ನು ಏಕಾಏಕಿ ಧ್ವಂಸ ಮಾಡಿದ್ದು, ಸರ್ಕಾರ ಆದಷ್ಟು ಬೇಗ ಪುತ್ಥಳಿಯನ್ನು ಉದ್ಯಾನವನದಲ್ಲಿ ಸ್ಥಾಪನೆ ಮಾಡಬೇಕೆಂದು ಡಾ.ವಿಷ್ಣು ಸೇನಾ ಸಮಿತಿ, ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ  ಡಾ.ವಿಷ್ಣುವರ್ಧನ್ 71ನೇ ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್ ಉದ್ಯಾನವನ, ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಪುತ್ಥಳಿಯನ್ನು ಏಕಾಏಕಿ ಧ್ವಂಸ ಮಾಡಿದ ಘಟನೆ ಕುರಿತು ಎಲ್ಲಾ ಹಿಂದೂ ಸಂಘಟನೆಗಳು, ರಾಜ್, ವಿಷ್ಣು, ದರ್ಶನ್, ಸುದೀಪ್ ಅಭಿಮಾನಿಗಳು ನಮ್ಮ ಜೊತೆ ಕೈಜೋಡಿಸಿ ಆದಷ್ಟು ಬೇಗ ಪುತ್ಥಳಿಯನ್ನು ಸರ್ಕಾರವೇ ಉದ್ಯಾನವನದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 11 ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದರೂ ಯಾವುದೇ ಗಮನಹರಿಸದೇ ಪ್ರತಿಬಾರಿಯೂ ಡಾ.ವಿಷ್ಣು ಅವರಿಗೆ ಅವಮಾನ ಮಾಡುತ್ತಿರುವುದು ಶೋಚನೀಯ ಸಂಗತಿ. ಯಾವುದಕ್ಕೂ ಗಮನ ಹರಿಸದ ಈ ಸರ್ಕಾರದ ನಡೆಯಿಂದ ಬೇಸತ್ತು ಅಭಿಮಾನಿಗಳೇ ಡಾ.ವಿಷ್ಣುವರ್ಧನ್ ಪುತ್ಥಳಿಯನ್ನು ಸ್ಥಾಪಿಸಿದ್ದರು. ಅದನ್ನು ಮೈಸೂರು ಮಹಾನಗರ ಪಾಲಿಕೆ ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಿರುವುದು ಓರ್ವ ಹಿರಿಯ ಕಲಾವಿದನಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: