ಮೈಸೂರು

ಮೈಸೂರು ರಾಜಮನೆತನದ ಆನೆಗಳು ಗುಜರಾತ್ ಗೆ

ಮೈಸೂರು,ಸೆ.21:- ಮೈಸೂರು ರಾಜಮನೆತನಕ್ಕೆ ಸೇರಿದ ಅರಮನೆಯಲ್ಲಿದ್ದ  ಆನೆಗಳನ್ನು   ಗುಜರಾತ್ ​ಗೆ ಕಳುಹಿಸಲು ಸಿದ್ಧತೆಗಳು ನಡೆಯುತ್ತಿದೆ.

ಆನೆಗಳ ಆರೋಗ್ಯದ ದೃಷ್ಟಿಯಿಂದ ಅರಮನೆಯ  ಆರು ಆನೆಗಳಲ್ಲಿ ನಾಲ್ಕು ಆನೆಗಳನ್ನು ಗುಜರಾತ್ ​ಗೆ ಕಳುಹಿಸಲಾಗುತ್ತದೆ ಎನ್ನಲಾಗಿದ್ದು, ಇನ್ನುಳಿದ ಎರಡು ಆನೆಗಳು ಅರಮನೆಯಲ್ಲೇ ಉಳಿದುಕೊಳ್ಳಲಿವೆ. ಗುಜರಾತಿನ ಆನೆ ಪುನರ್ವಸತಿ ಕೇಂದ್ರಕ್ಕೆ ಆನೆಗಳು ತೆರಳಲಿವೆ.

ಅರಮನೆ ಆನೆಗಳು ದಸರಾ ಪರಂಪರೆಯ ಪೂಜೆ ವೇಳೆ ಬಳಕೆಯಾಗುತ್ತಿದ್ದವು. ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದವು. ಇದೀಗ ಎರಡು ಆನೆಗಳನ್ನು ಉಳಿಸಿಕೊಂಡು ಉಳಿದ ಆನೆಗಳನ್ನು ಗುಜರಾತ್ ಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜಮನೆತನದವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಸೀತಾ, ರೂಬಿ, ರಾಜೇಶ್ವರಿ, ಜೆಮಿನಿ ಹೆಸರಿನ ಆನೆಗಳನ್ನು ಗುಜರಾತ್ ​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಚಂಚಲ್ ಮತ್ತು ಪ್ರೀತಿ ಹೆಸರಿನ ಎರಡು ಆನೆಗಳು ಅರಮನೆಯಲ್ಲೇ ಉಳಿಯಲಿವೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: