ಕರ್ನಾಟಕಪ್ರಮುಖ ಸುದ್ದಿ

ಗೋಣಿಮರೂರು ಗ್ರಾಮದಲ್ಲಿ ನಡೆದ ರಂಗಕರ್ಮಿ ಬಿ.ವಿ.ಕಾರಂತರ ಜನ್ಮದಿನ

ರಾಜ್ಯ(ಮಡಿಕೇರಿ )ಸೆ.22:-ರಂಗಕಲೆಗಳು ಸಮಾಜದ ಸಮಸ್ಯೆಗಳನ್ನು ತಿದ್ದಿ ತೀಡಿ ಸಮಾಜದ ಕೊಳಕನ್ನು ತೆಗೆಯುವಲ್ಲಿ ಸಂವಹನವಾಗಿ ಕೆಲಸ ಮಾಡಿದ್ದು, ಹವ್ಯಾಸಿ ರಂಗಭೂಮಿ ಕಲಾವಿದರು ನಾಟಕಗಳ ಮೂಲಕ ಸಂದೇಶ ನೀಡುತ್ತಿದ್ದರು ಎಂದು ಹಿರಿಯ ನಾಟಕ ಕಲಾವಿದ ಕಡುವಿನಹೊಳ್ಳಿ ಗೋವಿಂದೇಗೌಡ ಅವರು ಹೇಳಿದರು.
ರಂಗಾಯಣ ಮೈಸೂರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಗೋಣಿಮರೂರು ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಗೋಣಿಮರೂರು ಪ್ರೌಢಶಾಲಾ ಆವರಣದಲ್ಲಿ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಭಾರತೀಯ ರಂಗ ಸಂಗೀತ ದಿನ್ ರಂಗ ನಮನ ಕಾರ್ಯಕ್ರಮ ನಡೆಯಿತು.
ಹಿಂದೆ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯ ಮೂಲಕ ಏಣಗಿ ಬಾಳಪ್ಪ, ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಮುಂತಾದ ಹಿರಿಯ ಕಲಾವಿದರ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೌರಾಣಿಕ ನಾಟಕಕಾರ ಸಿದ್ದಲಿಂಗಪ್ಪ ಅವರು ನಾಟಕಗಳ ಮೂಲಕ ಸಿನಿಮಾ ರಂಗ ಸೃಷ್ಠಿಯಾಯಿತು. ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರುಗಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಸಮಾಜದ ಸಮಾನತೆಗೆ ದಾರಿದೀಪವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಅವರು ಬಿ.ವಿ.ಕಾರಂತರು ಹವ್ಯಾಸಿ ರಂಗಭೂಮಿಯ ಕಳೆದ ನಾಲ್ಕು ದಶಕಗಳ ಚರಿತ್ರೆಯಲ್ಲಿ ಸ್ಫೂರ್ತಿದಾಯಕರಾಗಿ ಕೆಲಸ ಮಾಡಿದ ಕೀರ್ತಿ ಸಲುತ್ತದೆ. ಅದರಿಂದಲೇ ಇವರ ಕನ್ನಡ ರಂಗ ಪ್ರದರ್ಶನಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡು ಜನಮನದಲ್ಲಿ ಅಜರಾಮರರಾಗಿ ಉಳಿದಿದ್ದಾರೆ.
ಗಣಗೂರು ಗ್ರಾ.ಪಂ.ಉಪಾಧ್ಯಕ್ಷರಾದ ಗೌರಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಂಗಭೂಮಿ ವೃತ್ತಿ ಕಲಾವಿದ ಕೆರೆಕೋಡಿ ವೆಂಕಟೇಶ್, ರೇವಪ್ಪ, ರಾಜಪ್ಪ ಇದ್ದರು.
ಕಾರ್ಯಕ್ರಮದಲ್ಲಿ ಜವರಪ್ಪ, ಬಾಣವಾರ ದೊಡ್ಡಪ್ಪ, ಶಾಂತಾಚಾರಿ, ರೇವಪ್ಪ, ಶಂಭುಲಿಂಗಪ್ಪ, ಯಶವಂತು, ಜಯಣ್ಣ, ಚಂದ್ರಪ್ಪ ಮುಂತಾದವರು ರಂಗಗೀತೆ ಹಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: