ಕರ್ನಾಟಕಪ್ರಮುಖ ಸುದ್ದಿ

ತುರ್ತು ಸ್ಪಂದನ ಸಹಾಯವಾಣಿ ಪ್ರಾರಂಭ

ರಾಜ್ಯ(ಮಡಿಕೇರಿ )ಸೆ.22:-ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಶಿಕ್ಷಕರ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಮನೆ ಮನೆಗೆ ಪರಿಚಯಿಸುವ “112 ಅಭಿಯಾನ” ವನ್ನು ವಾಟ್ಸಪ್ ಮೂಲಕ ಪ್ರಾರಂಭಿಸಿ, ಶಿಕ್ಷಕರ ಸಂಘಟನೆಯ ಮುಖ್ಯಸ್ಥರನ್ನು ಒಟ್ಟುಗೂಡಿಸಿ, ಅವರಲ್ಲಿ ಮಾಹಿತಿ ಹಂಚಿಕೊಂಡು ಅದನ್ನು ತಮ್ಮ ತಮ್ಮ ಅಧೀನದ ಮುಖ್ಯೋಪಾಧ್ಯಾಯರ ಮೂಲಕ ಪ್ರತಿ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಪ್ರಾರಂಬಿಸಲಾಗಿದೆ.
ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಾರ್ಯಕ್ರಮದ ಮೊದಲ ಭಾಗವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಪೊಲೀಸ್ ನಿರೀಕ್ಷಕರು ನಿಸ್ತಂತು ಕೆ.ಆರ್.ಕರುಣಾ ಸಾಗರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ನಿರೀಕ್ಷಕರು ನಿಸ್ತಂತು ಕೆ.ಎಸ್.ಹರಿಶ್ಚಂದ್ರ ಮತ್ತು ಕೆ.ಎಸ್.ಧನಂಜಯ ಅವರು ಸೋಮವಾರ ನಗರದ ಪದವಿ ಪೂರ್ವ ಕಾಲೇಜಿನಲ್ಲಿ “112 ಅಭಿಯಾನ”ದ ಬಗ್ಗೆ ಮಾಹಿತಿ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: