ಮೈಸೂರು

ಮಹದೇವಪುರಕ್ಕೆ ಹೋಗುವ ರಸ್ತೆಯಲ್ಲಿ ನೈರ್ಮಲ್ಯ ಕಾಪಾಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.22:- ಮಾನಂದವಾಡಿ ರಸ್ತೆ, ಮಹದೇವಪುರಕ್ಕೆ ಹೋಗುವ ರಸ್ತೆಯನ್ನು ಸ್ವಚ್ಛವಾಗಿರಿಸಿ ನೈರ್ಮಲ್ಯ ಕಾಪಾಡುವಂತೆ ಒತ್ತಾಯಿಸಿ ಶ್ರೀರಾಂಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶ್ರೀರಾಂಪುರ ಪಟ್ಟಣ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ  ಮಾನಂದವಾಡಿ ರಸ್ತೆಯಿಂದ ಮಹದೇವಪುರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ದಿನವೂ ಕಸ ತುಂಬಿ ತುಳುಕಾಡುತ್ತಿದೆ. ಒಳಚರಂಡಿಗೂ ಗಲೀಜು, ಮಳೆ ನೀರು ತುಂಬಿ ಹರಿಯುತ್ತಿದ್ದು ಸರಾಗವಾಗಿ ಸಾಗಲು ಆಗದಿರುವ ಕಾರಣ ಇಲ್ಲಿ ಸಾರ್ವಜನಿಕರು ತಿರುಗಾಡಲು ಪರದಾಡಬೇಕಿದೆ. ಕಸದಿಂದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ವೀಪರೀತವಾಗಿದೆ. ಕೂಡಲೇ ಸಂಬಂಧಪಟ್ಟವರು ಸ್ವಚ್ಛತಾ ಕಾರ್ಯ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟು ನೈರ್ಮಲ್ಯ ಕಾಪಾಡುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: