ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಬೆಂಗಳೂರು/ಮೈಸೂರು,ಸೆ.22:- ಇತ್ತಿಚೆಗೆ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸದನದಲ್ಲಿ ಇಂದು ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ಮೈಸೂರು ಗ್ಯಾಂಗ್ ರೇಪ್ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿ ಮಾತನಾಡಿದ ಸಿದ್ಧರಾಮಯ್ಯ, ಯುವತಿ ತನ್ನ ಸ್ನೇಹಿತನ ಜತೆ ವಾಯುವಿಹಾರಕ್ಕೆ ಅಲ್ಲಿಗೆ ಹೋಗಿದ್ದರು. ಆ ವೇಳೆ ಅತ್ಯಾಚಾರ ನಡೆದಿದೆ. ಮೈಸೂರು ಒಂದು ಸಾಂಸ್ಕೃತಿಕ ನಗರಿ. ಎಜುಕೇಷನ್ ಹಬ್ ಕೂಡ ಹೌದು. ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಇಂತಹ ನಗರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತೆ ಈ ಘಟನೆಯಿಂದ ಜನ ಭಯಭೀತರಾಗಿದ್ದಾರೆ. ಪೋಷಕರು ಆತಂಕಕ್ಕೊಳಗಾಗಿದ್ದಾರೆ ನಾನು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೆ. ನಮ್ಮ ಕಾಂಗ್ರೆಸ್ ನಿಂದ ಸತ್ಯಶೋಧನಾ ಸಮಿತಿ ರಚಿಸಿದ್ದವು. ಅವರು ಅಲ್ಲಿಗೆ ಹೋಗಿ ಪರಿಶೀಲಿಸಿ ಕೆಲ ಪ್ರಶ್ನೆಗಳನ್ನ ಎತ್ತಿದ್ದಾರೆ ಎಂದರು.

ಇಂತಹ ಘಟನೆಗಳನ್ನ ದೆಹಲಿಯ ನಿರ್ಭಯಾ ಕೇಸ್ ನಂತೆ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಗಂಭೀರ ಪ್ರಕರಣದಲ್ಲೂ.ಕೇಸ್ ದಾಖಲಿಸಲು ಪೊಲೀಸರು ಏಕೆ ತಡ ಮಾಡಿದರು..? ಘಟನೆ ನಡೆದ 14 ರಿಂಧ 15 ಗಂಟಗಳ ಬಳಿಕ ಎಫ್ ಐಆರ್ ದಾಖಲಾಗಿದೆ. ಪೊಲೀಸರು ಅನಗತ್ಯವಾಗಿ ತಡ ಮಾಡಿದ್ದು ಏಕೆ. ಹಾಗೆಯೆ ಯುವತಿಯ ಹೇಳಿಕೆಯನ್ನ ಕೂಡ ದಾಖಲಿಸಲಿಲ್ಲ ಎಂದು ಸರ್ಕಾರವನನ್ನ ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಸಂತ್ರಸ್ತ ಯುವತಿ, ಮತ್ತು ಯುವಕನ ಮುಂದೆ ಆರೋಪಿಗಳ ಪರೇಡ್ ನಡೆಸಿಲ್ಲ. ಆರೋಪಿಗಳನ್ನ ಗುರುತಿಸುವ ಕೆಲಸ ಆಗಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: