ಮೈಸೂರು

ಬಣ್ಣ ಬಳಿಯುತ್ತಿದ್ದ ಪೇಂಟರ್ ಮೇಲಿನಿಂದ ಬಿದ್ದು ಗಾಯ

ಮೈಸೂರು, ಸೆ.22:-  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಗೆ ಬಣ್ಣ ಬಳಿಯುತ್ತಿದ್ದ ಪೈಂಟರ್ ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ಅರಮನೆಯ ಜಯಮಾರ್ತಾಂಡ ದ್ವಾರ ಗೋಪುರಕ್ಕೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು. ಸುಮಾರು 20 ಅಡಿ ಎತ್ತರದಲ್ಲಿ ಬಣ್ಣ ಬಳಿಯುತ್ತಿದ್ದ ಮೈಸೂರಿನ ಗೌಸಿಯಾ ನಗರದ ಅಫ್ತಾಬ್ ಆಯತಪ್ಪಿ ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.ಗಾಯಗೊಂಡಿರುವ ಅಫ್ತಾಬ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: