Uncategorized

ಅಂಚೆ ಸೌಲಭ್ಯಗಳ ಜಾಗೃತಿ ಮತ್ತು ಆಧಾರ್ ನೋಂದಣಿತಿದ್ದುಪಡಿಕಾರ್ಯಕ್ರಮ

ಮೈಸೂರು, ಸೆ. 2:- ನಂಜನಗೂಡು ಅಂಚೆ ವಿಭಾಗದ ವತಿಯಿಂದ ಬಿಳಿಗಿರಿ ರಂಗನ ಬೆಟ್ಟಗ್ರಾಮ ಪಂಚಾಯಿತಿ ಇವರ ಸಂಯುಕ್ತಆಶ್ರಯದಲ್ಲಿ ಮಂಗಳವಾರ ಅಂಚೆ ಸೌಲಭ್ಯಗಳ ಜಾಗೃತಿ ಮತ್ತು ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮಕ್ಕೆ ಅಂಚೆ ಅಧೀಕ್ಷಕರಾದ ಹೆಚ್.ಸಿ. ಸದಾನಂದ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಅಂಚೆ ಅಧೀಕ್ಷಕರು ಮಾತನಾಡಿ ಅಂಚೆ ಇಲಾಖೆಯಿಂದ ಸೆಪ್ಟೆಂಬರ್ 21 ಮಂಗಳವಾರದಿಂದ ಸೆಪ್ಟೆಂಬರ್ 23ರವರಿಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸದವಕಾಶವನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮಕ್ಕೆ IPPB ಹಾಗೂ ASST ಮ್ಯಾನೇಜರ್ ಮಹದೇವಪ್ಪ, ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ ವಿನಯ್, ಸಿಸ್ಟಮ್ ಅಡ್ಮಿನ್ ನವೀನ್, ಆರ್.ಮಹೇಂದ್ರ, ರಾಜೇಂದ್ರ ಪ್ರಸಾದ್, ಶ್ರೀಕಂಠ, ಅಂಚೆ ನೌಕರರು, ಗ್ರಾಮಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮದ ಮುಖಂಡರಾದ ವೆಂಕಟೇಶ್, ನಾಗರಾಜ್, ಪ್ರತೀಪ್‍ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

comments

Related Articles

error: