
ಕರ್ನಾಟಕಪ್ರಮುಖ ಸುದ್ದಿ
ಸಿಇಟಿ ರ್ಯಾಂಕ್ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಿಎಂ
ರಾಜ್ಯ(ಬೆಂಗಳೂರು)ಸೆ.22:- ಪರೀಕ್ಷೆ ನಡೆದ ಕೇವಲ ಇಪ್ಪತ್ತೇ ದಿನದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆ (CET)ಯ ಫಲಿತಾಂಶದಲ್ಲಿ ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್ ಕೆ ಮೇಘನ್ ಎಂಜಿನಿಯರಿಂಗ್, ಪಶುವೈದ್ಯ, ಬಿಎಸ್ಸಿ (ಕೃಷಿ), ಬಿ-ಫಾರ್ಮಾ, ಡಿ-ಪಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಮೊದಲ ರ್ಯಾಂಕ್ ಗಳಿಸಿ ಹೊಸ ದಾಖಲೆ ಬರೆದ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಕಾರ್ಯದರ್ಶಿಗಳಾದ ಹೆಚ್ ವಿ ರಾಜೀವ್ ರವರು ಮತ್ತು ಇನ್ನಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)