ಮೈಸೂರು

ಹೋಟೆಲ್ ಮಾಲೀಕನಿಗೆ ಲಾಠಿ ಏಟು : ಖಂಡಿಸಿದ ಹೋಟೆಲ್ ಮಾಲೀಕರ ಸಂಘ

ಮೈಸೂರು,ಸೆ.23:- ಮೈಸೂರಿನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಲಾಗಿದೆ ಎಂದು ಹೋಟೆಲ್ ಮಾಲೀಕನಿಗೆ ಪೊಲೀಸರು ಲಾಠಿ ಏಟು ನೀಡಿರುವುದನ್ನು ಹೋಟೆಲ್ ಮಾಲೀಕರ ಸಂಘ ಖಂಡಿಸಿದೆ.
ಹಲ್ಲೆಗೊಳಗಾದ ಮಾಲೀಕರ ಬಳಿ ಮಾಹಿತಿ ಸಂಗ್ರಹಿಸಿದ ಸಂಘ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಮರುಕಳಿಸಿದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ. ಹೋಟೆಲ್ ಬಿಗ್ ಗ್ರಿಲ್ ಬಳಿ ಬಂದು ಮಾಹಿತಿ ಸಂಗ್ರಹಿಸಿ ಈ ಕುರಿತು ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಲು ನಿರ್ಧರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: