ಮೈಸೂರು

ಸಸಿ ನೆಡುವ ಮೂಲಕ ಪೌರ ಕಾರ್ಮಿಕರ ದಿನಾಚರಣೆ

ಪೌರ ಕಾರ್ಮಿಕರಿಗೆ ಸಿಹಿ ತಿನಿಸಿದ ಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್

ಮೈಸೂರು ಸೆ.23:-ಇಂದು ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ವಾರ್ಡ್ ನಂ 55ರ ವಿದ್ಯಾರಣ್ಯಪುರಂ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಪೌರಕಾರ್ಮಿಕ ದಿನಾಚರಣೆ ಯನ್ನು ಆಚರಿಸಲಾಯಿತು

ಮಾ ವಿ ರಾಮಪ್ರಸಾದ್ ಅವರು ಪೌರ ಕಾರ್ಮಿಕರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು

ನಂತರ ಮಾತನಾಡಿದ  ಅವರು ಪೌರ ಕಾರ್ಮಿಕರು ಶ್ರಮಜೀವಿಗಳು, ಪೌರ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಅವರ ವೃತ್ತಿಯನ್ನೇ ಅವಲಂಬಿಸುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ ಬೇರೆ ಬೇರೆ ಕ್ಷೇತ್ರದಲ್ಲಿ ಹೋಗುವಂತೆ ಮಾಡಬೇಕು ಎಂದು ತಿಳಿಸಿದರು

ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ನಡೆಯುತ್ತಿದ್ದು ಮತ್ತು ದಸರಾ ಹತ್ತಿರವಿದ್ದು ಮೈಸೂರಿಗೆ ಈಗಾಗಲೇ 2ಬಾರಿ ಸ್ವಚ್ಛ ನಗರಿ ಎಂಬ ಕಿರೀಟ ಹಾಕಿಕೊಂಡಿದ್ದು ಮೂರನೇ ಬಾರಿ ಬರಬೇಕಾದರೆ ಈ ಪೌರ ಕಾರ್ಮಿಕರ ಶ್ರಮ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಶಿವಪ್ರಸಾದ್, ವಾರ್ಡಿನ ಮೇಸ್ತ್ರಿ ಶೇಖರ್, ವೆಂಕಟೇಶ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: