ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಆಕರ್ಷಣೀಯ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ

ದಸರಾ ಉತ್ಸವ ಪ್ರಯುಕ್ತ ನಜರಾಬಾದ್ ಬಳಿಯ ಕುಪ್ಪಣ್ಣ ಪಾರ್ಕ್‍ನಲ್ಲಿ ಏರ್ಪಡಿಸಲಾದ ಫಲ ಪುಷ್ಪ ಪ್ರದರ್ಶನವನ್ನು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಿದರು.

1.5 ಲಕ್ಷದಿಂದ 2 ಲಕ್ಷ ಗುಲಾಬಿ ಹೂವನ್ನು ಬಳಸಿ ಸಿದ್ಧಪಡಿಸಿದ ಗೇಟ್ ವೇ ಆಫ್ ಇಂಡಿಯಾ ಈ ಬಾರಿಯ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಮತ್ತೊಂದು ಆಕರ್ಷಣೆ ಭಾರತೀಯ ಸೈನ್ಯದಲ್ಲಿ ಪರಿಚಯಿಸಲ್ಪಟ್ಟ ತೇಜಸ್ ಏರ್ ಕ್ರಾಫ್ಟ್, ಮೂರನೆಯ ಆಕರ್ಷಣೆ ಚೋಟಾ ಭೀಮ್‍.

ಈ ಬಾರಿಯ ಫಲಪುಷ್ಪ ಪ್ರದರ್ಶನವು ಪ್ಲಾಸ್ಟಿಕ್‍ ಮುಕ್ತವಾಗಿದೆ. ಇಂದಿನಿಂದ 12 ದಿನಗಳ ಕಾಲ ನಡೆಯಲಿರುವ ಫಲ ಪುಷ್ಪ ಪ್ರದರ್ಶನ ಸಾರ್ವಜನಿಕರನ್ನು ತನ್ನತ್ತ ಸೆಳೆಯಲಿದೆ.

 

Leave a Reply

comments

Related Articles

error: