ಮೈಸೂರು

ತಾಯಿ ಭುವನೇಶ್ವರಿಯ ಕಂಚಿನ ಪ್ರತಿಮೆ ಅನಾವರಣಗೊಳಿಸಲು ಮನವಿ

ಮೈಸೂರಿನಲ್ಲಿ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ವರ್ಷ ನಡೆಯಬೇಕೆಂದು ಸರ್ಕಾರ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದ್ದು ಇದು ಮೈಸೂರಿನ ಜನತೆಗೆ ಒಂದು ಹಬ್ಬದ ದಿನವಾಗಿದೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು  ಈ ದಿನವನ್ನು ಕನ್ನಡಿಗರೆಲ್ಲ ಬಹಳ ಸಂಭ್ರಮದಿಂದ ಸಾಂಸ್ಕೃತಿಕ ನಗರಿಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಲು ಉತ್ಸುಕರಾಗಿದ್ದಾರೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಲು ಮೈಸೂರಿನಲ್ಲಿ ಒಂದು ವೃತ್ತ ಗುರುತಿಸಿ ( ವಿದ್ಯಾಪೀಠ ವೃತ್ತ)  ತಾಯಿ ಭುವನೇಶ್ವರಿಯ ಶಾಶ್ವತ ಬೃಹತ್  ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆದ ನೆನಪನ್ನು ಕನ್ನಡಿಗರಿಗೆ ಉಳಿಸಲು ಕರ್ನಾಟಕ ಸರ್ಕಾರಕ್ಕೆ ಮತ್ತು ಮೈಸೂರು ಮಹಾನಗರ ಪಾಲಿಕೆಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಲಾಗುವುದು ಎಂದಿದ್ದಾರೆ.

Leave a Reply

comments

Related Articles

error: