ಮೈಸೂರು

ಸೆಪ್ಟೆಂಬರ್ 25 ರಂದು ವಿದ್ಯುತ್ ನಿಲುಗಡೆ

ಮೈಸೂರು, ಸೆ. 24:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ವಿದ್ಯುತ್ ನಿಗಮ ನಿಯಮಿತದ ವತಿಯಿಂದ ಸೆಪ್ಟೆಂಬರ್ 25 ರಂದು 220/66/11 ಕೆವಿ ವಾಜಮಂಗಲ ಮತ್ತು 66/11 ಕೆವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 2ನೇ ತ್ರೈಮಾಸಿಕ ಅವಧಿಯ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆ ಅಂದು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ವಾಜಮಂಗಲ ವಿ.ವಿ. ಕೇಂದ್ರದ ವ್ಯಾಪ್ತಿಯ ಮೆಲ್ಲಹಳ್ಳಿ, ಹಾರೋಹಳ್ಳಿ, ಹಳೆಕೆರಿಹುಂಡಿ, ಶಿವಪುರ, ಹಲಗಯ್ಯನಹುಂಡಿ, ಪಿಲ್ಲಹಳ್ಳಿ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೆಗೌಡನಹುಂಡಿ, ವರುಣ, ದಂಡಿಕೆರೆ, ವಾಜಮಂಗಲ, ಮೊಸಂಬಾಯನಹಳ್ಳಿ, ಯಾಂದಳ್ಳಿ, ಸಜ್ಜೆಹುಂಡಿ, ಜಂತಗಳ್ಳಿ, ಮಹದೇಶ್ವರ ಬಡಾವಣೆ, ಇಂಡಸ್ ಬಡಾವಣೆ, ಭೂಗತಗಳ್ಳಿ ಗೇಟ್, ಚಿಕ್ಕಹಳ್ಳಿ, ಚೋರನಹಳ್ಳಿ, ಭೂಗತಗಳ್ಳಿ, ನಾಡನಹಳ್ಳಿ, ಪೋಲೀಸ್ ಬಡಾವಣೆ, ನೇತಾಜಿನಗರ, ಐಪಿಎಸ್ ನಗರ, ಲಾಲ್ ಬಹದ್ದೂರು ಶಾಸ್ತ್ರಿ ನಗರ, ಎಸ್.ಎಂ.ಪಿ. ಡೆವಲಪ್ಪರ್ಸ್ ಶೋಭ ಡೆವಲಪ್ಪರ್ಸ್, ಯಶಸ್ವಿನಿ ಹಿಲ್ ವ್ಯೂ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೇಗೌಡನಹುಂಡಿ, ಜಂತಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದಳ್ಳಿ, ಜೆ.ಎಸ್.ಎಸ್. ಬಡಾವಣೆ, ವಸಂತನಗರ, ಸುಕದಾಯಿ ಬಡಾವಣೆ, ಶಾಂತವೇರಿ ಗೋಪಾಲಗೌಡ ನಗರ, ಸಪ್ತಮಾತೃಕ ಬಡಾವಣೆ, ಸಹೃದಯ ನಗರ, ಪ್ರಕೃತಿ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ದೊಡ್ಡಕೆರೆ ಮೈದಾನ ವಿ.ವಿ. ಕೇಂದ್ರದ ವ್ಯಾಪ್ತಿಯರಾಮಾನುಜ ರಸ್ತೆ, ಹೊಸಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂನ ಹಲವು ಭಾಗಗಳು, ಸಬರ್ಬ್ ಬಸ್ ನಿಲ್ದಾಣ, ನಜರ್‍ಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು, ತಾಲ್ಲೂಕು ಕಛೇರಿ, ಡಿ. ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಆಲನಹಳ್ಳಿ ಸುತ್ತ-ಮುತ್ತಲಿನ ಪ್ರದೇಶಗಳು, ಗಿರಿದರ್ಶಿನಿ ಬಡಾವಣೆ, ಅರಮನೆ ಸುತ್ತ-ಮುತ್ತಲಿನ ಪ್ರದೇಶಗಳು, ಶ್ರೀ ಹರ್ಷ ರಸ್ತೆ, ಸಯ್ಯಾಜೀರಾವ್ ರಸ್ತೆ, ಇರ್ವಿನ್ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: